ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ

IMA
Published on

ಬೆಂಗಳೂರು: ವೈದ್ಯರ ದಿನದ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಂಗಳೂರು ಘಟಕ ನೀಡುವ ಪ್ರಶಸ್ತಿಗೆ ಏಳು ವೈದ್ಯರು ಆಯ್ಕೆಯಾಗಿದ್ದಾರೆ.

ಡಾ. ಕೆ. ವೇಣುಗೋಪಾಲ್, ಡಾ. ಎ.ಎಸ್. ವೆಂಕಟಾಚಲಪತಿ, ಡಾ. ಟಿ.ಎಸ್. ಚನ್ನಪ್ಪ, ಡಾ. ರೇಖಾ ರಾಜೇಂದ್ರಕುಮಾರ್, ಡಾ. ಕೆ. ರಮೇಶ್ ಕೃಷ್ಣ, ಡಾ. ವಿ. ನಾರಾಯಣಸ್ವಾಮಿ ಹಾಗೂ ಡಾ. ಸಿ.ಎನ್. ರಂಗನಾಥ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶನಿವಾರ (ಜು.13) ಸಂಜೆ 6 ಗಂಟೆಗೆ ಲಾ ಮಾರ್ವೆಲ್ಲ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಮುಖ್ಯ ಅತಿಥಿಯಾಗಿ ಸಂಸದ ಹಾಗೂ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್, ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ್, ಕರ್ನಾಟಕ ವೈದ್ಯಕೀಯ ಪರಿಷತ್ತು ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net