ಉಜ್ವಲಾ ಕಂಬಳಿಗೆ ಡಾಕ್ಟರೇಟ್

Gur_Ujwala
Published on

ಗುರುಪುರ: ಗ್ರಾಮೀಣ ರೈತರ ಸಾವಾಜಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸವ್ಮಾನ್ ನಿಧಿ ಯೋಜನೆಯ ಬಹುಮುಖಿ ಪರಿಣಾಮ’ ವಿಷಯದಲ್ಲಿ ಉಜ್ವಲಾ ಕಂಬಳಿ ಅವರು ಸಿದ್ಧಪಡಿಸಿ ಸಲ್ಲಿಸಿರುವ ಪ್ರೌಢ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯದ ನಿರ್ವಹಣಾ ಮತ್ತು ವಾಣಿಜ್ಯ ಸಂಸ್ಥೆ ವಿಭಾಗವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಡಾ.ಶೈಲಶ್ರೀ ವಿ.ಟಿ. ಮತ್ತು ಡಾ.ನಿಯಾಜ್ ಪಣಕಜೆ ವಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿರುವ ಡಾ. ಉಜ್ವಲಾ ಕಂಬಳಿ ಅವರು ಮೂಲತಃ ಕುಪ್ಪೆಪದವು ಬಳ್ಳಾಜೆಯ ಉದಯಕುವಾರ್ ಮತ್ತು ಹರ್ಷಲತಾ ದಂಪತಿ ಪುತ್ರಿ.

ಸವಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಿ. ಎ. ರಾವೇಂದ್ರ ರಾವ್, ಹಂಗಾಮಿ ಉಪಕುಲಪತಿ ಡಾ.ಎ.ಶ್ರೀನಿವಾಸ ರಾವ್, ರಿಜಿಸ್ಟ್ರಾರ್ ಡಾ. ಅಜಯ್ ಕುವಾರ್, ಸಂಶೋಧನಾ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ, ಮೈಸೂರು ವಿಶ್ವವಿದ್ಯಾಲಯದ ಬಾಹ್ಯ ಪರೀಕ್ಷಕ ಡಾ. ಅಶೋಕ್ ಎಂ.ಎಲ್., ಸಂಶೋಧನಾ ವಾರ್ಗದರ್ಶಕರು, ಅಧ್ಯಾಪಕರು, ಸಹಸಂಶೋಧಕರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net