ಪ್ರವಾಸೋದ್ಯಮ ಉದ್ಯಮಶೀಲತೆ ಸಂವಾದ

dc
Published on

ಕಾಸರಗೋಡು: ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಪ್ರವಾಸೋದ್ಯಮ ಸಂವಾದ ಇತ್ತೀಚೆಗೆ ಜರುಗಿತು.

ಜಿಲ್ಲಾಧಿಕಾರಿ ಇನ್ಬಾಶೇಖರ್ ಸಂವಾದ ಉದ್ಘಾಟಿಸಿದರು. ಪ್ರಾಂಶುಪಾಲ ಮಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಿಂಧು ಜೋಸೆಫ್, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಕಾರ್ಯಕ್ರಮ ಸಂಯೋಜಕ ಅಖಿಲ್‌ದೇವ್ ಹಾಗೂ ದಾವೂದ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಿಂಧು ಜೋಸೆಫ್ ಸಮನ್ವಯಕಾರರಾಗಿ ಸಹಕರಿಸಿದರು. ಪ್ರಮುಖರಾದ ಅಬ್ದುಲ್ಲಾ, ಸೈಫುದೀನ್ ಕಳನಾಡ್, ಶ್ಯಾಮಲಾ, ಮಹದೇವನ್ ಪಿ, ಎಂ.ಎ.ಖಾದರ್ ಮತ್ತು ಟಿ.ಜಿ.ಗಂಗಾಧರನ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net