ಕಿಟಕಿಗೆ ನೇಣು ಹಾಕಿಕೊಂಡು ಡಾಕ್ಟರ್ ಆತ್ಮಹತ್ಯೆ​; ಇಬ್ಬರ ಅಗಲಿಕೆಯಿಂದ ನೊಂದಿದ್ದ ವೈದ್ಯೆ..

Window
Published on

ಆನೇಕಲ್: ವೈದ್ಯೆಯೊಬ್ಬರು ಮನೆಯಲ್ಲಿನ ಕಿಟಿಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಇಂಥದ್ದೊಂದು ಆತ್ಮಹತ್ಯೆ ನಡೆದಿದೆ. ವೈದ್ಯೆ ಶೈಲಜಾ ಕುಮಾರಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವರು.

ಡಾ.ಶೈಲಜಾ ಇಗ್ಗಲೂರಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ವೃತ್ತಿ ಜೀವನ ನಡೆಸುತ್ತಿದ್ದರು. ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿಯ ವಿವಿಎಚ್​ಸಿ ಅಪಾರ್ಟ್​ಮೆಂಟ್​​ನಲ್ಲಿ ಇವರು ವಾಸವಿದ್ದರು. ಆದರೆ ದಾಂಪತ್ಯ ವಿರಸದಿಂದಾಗಿ ಈಕೆ ಪತಿಯಿಂದ ದೂರವಿದ್ದರು. ಕೆಲವರ್ಷಗಳಿಂದ ಇವರಿಬ್ಬರೂ ಬೇರೆಯಾಗಿದ್ದರು.

ಶೈಲಜಾ ತಮ್ಮ ಪುತ್ರಿಯೊಂದಿಗೆ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಆದರೆ ಇತ್ತೀಚೆಗೆ ಇವರ ಮಗಳೂ ಸಾವಿಗೀಡಾಗಿದ್ದಳು. ಪತಿ ಹಾಗೂ ಪುತ್ರಿ ಇಬ್ಬರ ಅಗಲಿಕೆಯಿಂದ ಈಕೆ ಮಾನಸಿಕವಾಗಿ ನೊಂದಿದ್ದು, ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿನ ಕಿಟಿಕಿಗೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net