Bigg Boss​ ಹಾಗೂ ಸುದೀಪ್​​ ಮಧ್ಯೆ ನಡೆದಿರುವ ಮಾತುಕತೆಯ ಅಸಲಿ ಸಂಗತಿ ಗೊತ್ತಿರುವ ಏಕೈಕ ವ್ಯಕ್ತಿ ಯಾರು ಗೊತ್ತಾ?

sudeep
Published on

ಬೆಂಗಳೂರು:  ಕಿಚ್ಚ ಸುದೀಪ್ ( Sudeep​ )​​ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್​ಬಾಸ್ ( Bigg Boss ) ಕನ್ನಡ​ ಸೀಸನ್​​ 11ಗೆ  9.9 ಟಿಆರ್​ಪಿ ಬಂದಿದೆ ಎಂದು ಬಿಗ್​ಬಾಸ್​ ತಂಡ ಘೋಷಿಸಿದ್ದ ಬೆನ್ನಲ್ಲೇ ಇದೀಗ ಸುದೀಪ್​ ಕೂಡಾ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸುದೀಪ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಟ್ವೀಟ್​​ ಮಾಡುತ್ತಿದ್ದಂತೆ ಹತ್ತು ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

Kichcha Sudeep

ಸುದೀಪ್​ ಅವರ ಟ್ವೀಟ್​​ನಲ್ಲಿ ಏನಿದೆ?: 

‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್​ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್​ ಬಾಸ್​. ಇಷ್ಟು ವರ್ಷಗಳ ಕಾಲ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್​ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್​ ಅವರು ಶಾಕಿಂಗ್​ ವಿಷಯ ತಿಳಿಸಿದ್ದಾರೆ.

Kichcha Sudeepa

ಕಿಚ್ಚನ ಈ ದಿಢೀರ್​ ನಿರ್ಧಾರಕ್ಕೆ ಕಾರಣವೇನು ಎಂಬ ಚರ್ಚೆಗಳು ಸಹ ಇದೀಗ ನಡೆಯುತ್ತಿವೆ. ಇದರ ನಡುವೆ ಕಿಚ್ಚನ ಈ ಖಡಕ್​ ನಿರ್ಧಾರಕ್ಕೆ ಅವರಿಗಾದ ಅವಮಾನವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂಥದ್ದೊಂದು ಗಂಭೀರ ಆರೋಪವನ್ನು ಕನ್ನಡಪರ ಹೋರಾಟಗಾರ ಹಾಗೂ ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ರೂಪೇಶ್​ ರಾಜಣ್ಣ ಮಾಡಿದ್ದಾರೆ. ಆದರೆ ಇತ್ತು ಕಿಚ್ಚ ಯಾಕೆ ದಿಢೀರ್​ ಎಂದು ಈ ನಿರ್ಧಾರ ತೆಗೆದುಕೊಂಡರು ಎನ್ನುವ ಮಾತು ಕೂಡಾ ಕೇಳಿ ಬಂದಿದೆ.

 ಬಿಗ್​ಬಾಸ್​​ ಸೀಕ್ರೆಟ್​​ ಗೊತ್ತಿರುವ ಏಕೈಕ ವ್ಯಕ್ತಿ  ಚಕ್ರವರ್ತಿ ಚಂದ್ರಚೂಡ್

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ಸುದೀಪ್ ಹಾಗೂ ಚಕ್ರವರ್ತಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ.  ಸುದೀಪ್​​ ಅವರ ಜತೆ ಹೆಚ್ಚು ಆಪ್ತತೆ ಹೊಂದಿರುವವರಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.  ಸುದೀಪ್​ ಅವರಿಗೆ ಸಂಬಂಧಿತ  ಸೋಶಿಯಲ್​ ಮೀಡಿಯಾ ಹಾಗೂ ಇನ್ನಿತರ ಪರ್ಸನಲ್​ ಕೆಲಸಗಳನ್ನು ಚಕ್ರವರ್ತಿ ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.  ಹೀಗಾಗಿ  ಸುದೀಪ್​ ಹಾಗೂ ಬಿಗ್​ಬಾಸ್​​ ಮಧ್ಯೆ ಏನಾಗಿದೆ? ಅವರ ದಿಢೀರ್​ ನಿರ್ಧಾರಕ್ಕೆ ಕಾರಣವೇನು ಎನ್ನುವ ಅಸಲಿ ಮಾಹಿತಿ ಗೊತ್ತಿರುವ ಏಕೈಕ ವ್ಯಕ್ತಿ ಎಂದು ಯಾರಾದ್ರು ಇದ್ದರೆ ಅವರೆ ಚಕ್ರವರ್ತಿ ಎನ್ನುವ ಮಾತು ಕೂಡಾ ಮೂಲಗಳಿಂದ ತಿಳಿದು ಬಂದಿದೆ.

ಸುದೀಪ್​ ಅವರು ಟ್ವೀಟ್​​ ಮಾಡುತ್ತಿದ್ದಂತೆ ಚಕ್ರವರ್ತಿ ಚಂದ್ರಚೂಡ್​​ ಕೂಡಾ ಟ್ವೀಟ್​​ ಮಾಡಿ, ದಾದಾ ಈ ನಿರ್ಧಾರದಿಂದ ನಿಮ್ಮ ಮೇಲಿನ ಗೌರವ ಹೆಚ್ಚಾಯಿತು ಎಂದು ರಿಟ್ವೀಟ್​​ ಮಾಡಿದ್ದಾರೆ.

ಇತ್ತ ಬಿಗ್​ಬಾಸ್​​ ವೀಕ್ಷಕರು ಕಿಚ್ಚನ ಸಂಚಿಕೆ ನೋಡಲು ವೀಕೆಂಡ್​ನಲ್ಲಿ ಮಿಸ್​ ಮಾಡಿಕೊಳ್ಳುವುದು ಪಕ್ಕಾ ಹೌದು. ಸುದೀಪ್​ ಅವರು ಇಲ್ಲದೆ ಬಿಗ್​ಬಾಸ್​​ ಕಾರ್ಯಕ್ರಮವೇ ಇಲ್ಲ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್​​ ಅವರು ಮುಂದಿನ ದಿನಗಳಲ್ಲಿ ಏನಾದ್ರು ಈ ಕುರಿತಾಗಿ ಮತ್ತೆ ಸುದ್ದಿಗೊಷ್ಟಿ ಮಾಡಿ ಏನಾದ್ರು ಮಾಹಿತಿ ಬಿಟ್ಟುಕೊಡ್ತಾರಾ? ಅಥವಾ ಅಸಲಿ ಸಂಗತಿ ತಿಳಿದಿರುವ ಸುದೀಪ್​​ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಏನಾದ್ರೂ  ಮಾಹಿತಿ ಹಂಚಿಕೊಳ್ಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net