ಹೆಸರಿಗಾಗಿ ದಾನವನ್ನು ಮಾಡಬೇಡಿ

do charity for the sake of fame
ಹುನಗುಂದದಲ್ಲಿ ಹಮ್ಮಿಕೊಂಡ ನಾಗಬನದ ದೇವಸ್ಥಾನ ಲೋಕಾರ್ಪಣೆ ಮತ್ತು ಮರುಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ನೆರವೇರಿಸಿದರು. ಶಿವಕುಮಾರ ಮಹಾಸ್ವಾಮಿಗಳು, ರುದ್ರಮುನಿ ಸ್ವಾಮೀಜಿ, ಗುರುಬಾಯಿ ಹೂಗಾರ, ಪಿಎಸ್‌ಐ ಚನ್ನಯ್ಯ ದೇವೂರ, ಮಲ್ಲಣ್ಣ ಹೂಗಾರ ಇದ್ದರು.
Published on

ಹುನಗುಂದ: ನಾಗಬನ ದೇವಸ್ಥಾನ ಮುಂದಿನ ದಿನಗಳಲ್ಲಿ ಹುನಗುಂದದಲ್ಲಿಯೇ ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಸಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಹೂಗಾರ ಬಡಾವಣೆಯ ಓಂ ಶಾಂತಿ ನಗರದಲ್ಲಿ ಹಮ್ಮಿಕೊಂಡಿದ್ದ ನಾಗಬನದ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಮರುಪ್ರತಿಷ್ಠಾಪನೆ, 6ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುಪ್ತವಾಗಿ ದಾನವನ್ನು ಮಾಡಬೇಕು.

ಸರಿಗಾಗಿ ದಾನವನ್ನು ಮಾಡಬೇಡಿ. ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ತಂದೆ-ತಾಯಿಗಳನ್ನು ವೃದ್ಧಾಪ್ಯದಲ್ಲಿ ಕಾಳಜಿಯಿಂದ ನೋಡಿಕೊಳ್ಳಬೇಕೆಂದು ತಿಳಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾಗದೇವತೆಯು ಶಕ್ತಿ ದೇವತೆಯಾಗಿದ್ದು, ಶ್ರದ್ಧೆ-ಭಕ್ತಿಯಿಂದ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ನಡೆದುಕೊಂಡರೆ ಜೀವನದಲ್ಲಿ ಯಾವುದೇ ಕಷ್ಟ ಬರುವುದಿಲ್ಲ.

ದೇವಸ್ಥಾನಕ್ಕೆ ಕಾಂಪೌಂಡ್ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನನ್ನ ಶಾಸಕ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಹಣ ಮಂಜೂರು ಮಾಡುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ಹಳ್ಳದ ನೀರು ಬಡಾವಣೆಗೆ ನುಗ್ಗುತ್ತಿರುವುದರಿಂದ ಹಳ್ಳಕ್ಕೆ ತಡೆಗೋಡೆ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದರು.

ಸೋಮನಾಳದ ಚಿಕ್ಕಬೊಮ್ಮನಾಳ ಹಿರೇಮಠ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿದ್ದರು. ಪುರಸಭೆ ಮಾಜಿ ಉಪಾಧ್ಯಕ್ಷೆ, ಸದಸ್ಯೆ ಗುರುಬಾಯಿ ಹೂಗಾರ, ಪಿಎಸ್‌ಐ ಚನ್ನಯ್ಯ ದೇವೂರ, ಗೌರವಾಧ್ಯಕ್ಷ ಪ್ರಭು ಉಪನಾಳ, ಸಮಿತಿ ಅಧ್ಯಕ್ಷರಾದ ಮಲ್ಲಣ್ಣ ಹೂಗಾರ, ವಿ.ಎಸ್.ಅಂಗಡಿ, ಎ.ಕೆ.ಉಪನಾಳ, ಬಿ.ಎಸ್.ಹೊಸಮನಿ, ಪಿ.ಜಿ.ಹಾಸಲಕಾರ, ಗೌಡಪ್ಪ ಗೌಡರ, ಹೇಮಂತ ನೀರಡ್ಡಿ, ಬಸವರಾಜ ಇಂಜಿಗನೇರಿ, ಜೈನಸಾಬ ಹಗೇದಾಳ, ಮುತ್ತಣ್ಣ ಕಲಗೋಡಿ, ಮಹಾಂತೇಶ ನಾಡಗೌಡರ, ಶಿವು ಹಗೇದಾಳ, ಸುರೇಶ ಹಳಪೇಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net