ಗಣಿಗಾರಿಕೆ ನಡೆಸಲು ಪರವಾನಗಿ ನೀಡಬೇಡಿ

manavi
ಲೋಕಾಪುರ ಸಮೀಪದ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಮನವಿ ಸಲ್ಲಿಸಿದರು. ಶಿವಾನಂದ ಉದುಪುಡಿ, ಧರ್ಮಪ್ಪ ಮಾದರ, ರವೀಂದ್ರ ಕೊಡ್ಲೆಪ್ಪನವರ, ಉದಯಸಿಂಗ ಪಡತಾರೆ, ಮಹಾಲಿಂಗಪ್ಪ ಹುಂಡೇಕಾರ ಇತರರು ಇದ್ದರು.
Published on

ಬಾಗಲಕೋಟೆ: ಜೆ.ಕೆ.ಸಿಮೆಂಟ್ ಕಾರ್ಖಾನೆಯವರು ಗಣಿಗಾರಿಕೆ ನಡೆಸಲು ಪರವಾನಗಿ ಕೊಡಿಸುವ ಉದ್ದೇಶದಿಂದ ಪರಿಸರ ಇಲಾಖೆ ಹಮ್ಮಿಕೊಂಡಿರುವ ಸಾರ್ವಜನಿಕರ ಸಭೆ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಸೋಮವಾರ ರೈತರು ಮನವಿ ಸಲ್ಲಿಸಿದರು.

ಜೆ.ಕೆ.ಸಿಮೆಂಟ್ ಕಾರ್ಖಾನೆಯವರು ಮುದ್ದಾಪುರ ಸುತ್ತಮುತ್ತ 100 ವರ್ಷಗಳಿಗೆ ಅನುಕೂಲವಾಗುವಷ್ಟು ಸುಣ್ಣದ ಕಲ್ಲುಗಳ ಗಣಿಗಾರಿಕೆ ನಡೆಸಲು ಸಂಪನ್ಮೂಲ ಲಭ್ಯವಿದೆ. ಆದರೂ ಸಿಮೆಂಟ್ ಕಾರ್ಖಾನೆಯವರು ಹೆಚ್ಚುವರಿ ಗಣಿಗಾರಿಕೆ ನಡೆಸಲು ಪರಿಸರ ಇಲಾಖೆಯ ಅನುಮತಿ ಕೇಳಿ ಸಾರ್ವಜನಿಕರ ಸಭೆ ಹಮ್ಮಿಕೊಂಡಿದ್ದಾರೆ. ಕೂಡಲೇ ಈ ಸಭೆ ರದ್ದುಪಡಿಸಿ ರೈತರ ಹಿತ ಕಾಪಾಡಬೇಕು ಎಂದು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ, ಜಾಲಿಕಟ್ಟಿ ಕೆ.ಡಿ., ಜಾಲಿಕಟ್ಟಿ ಬಿ.ಕೆ. ಹಾಗೂ ಹಣಮನೇರಿ ಗ್ರಾಮಗಳ ರೈತರು ಜಿಲ್ಲಾಡಳಿತಕ್ಕೆ ಆಗ್ರಹಪಡಿಸಿದರು.

ಜೆ.ಕೆ.ಸಿಮೆಂಟ್ ಅನಗತ್ಯವಾಗಿ ರೈತರ ಜಮೀನನ್ನು ಮತ್ತೆ ಗಣಿಗಾರಿಕೆಗೆ ಬಳಸಿಕೊಳ್ಳಬಾರದು ಎಂದು ವಿನಂತಿಸಿದರು. ಮುಖಂಡರಾದ ಶಿವಾನಂದ ಉದಪುಡಿ, ಧರ್ಮಪ್ಪ ಮಾದರ, ರವೀಂದ್ರ ಕೊಡ್ಲೆಪ್ಪನವರ, ಉದಯಸಿಂಗ ಪಡತಾರೆ, ಮಹಾಲಿಂಗಪ್ಪ ಹುಂಡೇಕಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net