

ರಾಮನಗರ: ಇಗ್ಗಲೂರು ಡ್ಯಾಂ ಟೇಪ್ ಕತ್ತರಿಸಿ ಹೋದವರು, ನೀರಾ ಗಲಾಟೆ ವೇಳೆ ಬಂದಿದ್ದು, ಈಗಲೂ ಅಷ್ಟೇ ಚುನಾವಣೆ ಮುಗಿದ ಮೇಲೆ ಅವರು ಇತ್ತ ಕಡೆ ಬರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಹುಣಸನಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿಗಳ ಸಮುದಾಯದ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಸಮರದ ಮೇಲೆ ಸಮರ ನಡೆಯುತ್ತಿದೆ. ಸಮರ ಮಾಡುವವರು ಎಂದಿಗೂ ಅಭಿವೃದ್ಧಿ ಮಾಡುವುದಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿ ಆಗಿದ್ದ ದೇವೇಗೌಡರು, ಇಲ್ಲಿನ ಶಾಸಕರಾಗಿದ್ದ ಎಂ.ವರದೇಗೌಡರ ಒತ್ತಾಸೆಯಂತೆ ಬಂದು ಇಗ್ಗಲೂರು ಡ್ಯಾಂ ಟೇಪ್ ಕತ್ತರಿಸಿ ಹೋಗಿದ್ದರು. ಬಳಿಕ ನೀರಾ ಗಲಾಟೆ ಸಮಯದಲ್ಲಿ ಬಂದು, ಪುಟ್ಟಣ್ಣ, ಬಾಲಕೃಷ್ಣ ಮೇಲೆ ಕೇಸ್ ವಾಡಿಸಿ ಹೋದರು. ಈಗ ಚುನಾವಣೆಗೆ ಬಂದು ಈ ಸರ್ಕಾರ ತೆಗಿತೀನಿ ಅಂತಿದ್ದಾರೆ. ಆದರೆ, ಅವರ ಕೈಯಲ್ಲಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರು.
ಕುತಂತ್ರಮಾ ಡಿ ಡಿಕೆಶಿಯನ್ನು ಜೈಲಿಗೆ ಕಳುಹಿಸುವ ಕೆಲಸ ವಾಡಿದ್ದೀರಿ, ಈಗ ಸಿದ್ದರಾಮಯ್ಯ ವಿರುದ್ಧವೂ ಆ ಪ್ರಯೋಗ ವಾಡ್ತಿದ್ದಾರೆ ಎಂದು ಎಚ್‌ಡಿಕೆ ವಿರುದ್ಧ ಕಿಡಿಕಾರಿದ ಡಿ.ಕೆ ಸುರೇಶ್, ಗ್ಯಾರಂಟಿ ಕೊಟ್ಟು ಜನರ ಅಭಿವೃದ್ಧಿ ವಾಡಿದ್ದಕ್ಕೆ ಹೀಗೆ ವಾಡ್ತಿದ್ದೀರಾ? ಎಂದು ಪ್ರಶ್ನಿಸಿದರು.
ನೂರು ವರ್ಷ ಚೆನ್ನಾಗಿರಿ ನೀವು ಚನ್ನಪಟ್ಟಣಕ್ಕೆ ಬಂದು ಎದೆ ಚಚ್ಚಿಕೊಂಡು ಮಾತಾಡ್ತೀರಿ. ಗೌಡರೇ ನಿಮ್ಮ ಆರೋಗ್ಯ ಚೆನ್ನಾಗಿರಲಿ. ನೀವು 100 ವರ್ಷ ಚೆನ್ನಾಗಿರಿ. ನೀವು ಈ ದೇಶದ ಅಭಿವೃದ್ಧಿಗೆ ಸಲಹೆ ಕೊಡುತ್ತೀರಾ ಅಂದುಕೊಂಡಿದ್ದೋ, ಆದರೆ, ನಿಮ್ಮ ಮೊಮ್ಮಗನ ಪರವಾಗಿ ಮತ ಕೇಳೊಕೆ ಬಂದಿದ್ದೀರಿ. ಹಾಸನದಲ್ಲಿಯೂ ಮತ ಕೇಳುತ್ತೀರಿ, ಇಲ್ಲಿಯೂ ಬಂದು ಕೇಳುತ್ತಿದ್ದೀರಿ, ಸರ್ವರಿಗೂ ಸಮಪಾಲು ಅಂದರೆ ನಿಮ್ಮ ಕುಟುಂಬಕ್ಕೆ ಇರಬೇಕು ಎಂದು ಡಿ.ಕೆ.ಸುರೇಶ್ ವ್ಯಂಗವಾಡಿದರು.
ಅವರು ಡಿಸಿಎಂ ಬಗ್ಗೆ ಮಾತನಾಡಿದ್ರೆ ನಾನು ಸುಮ್ಮನಿರ್ತಿದ್ದೆ. ಆದರೆ ನಮ್ಮ ಅಣ್ಣನ ಬಗ್ಗೆ ಅವರು ಮಾತನಾಡಿದ್ದಾರೆ. ನಮ್ಮಣ್ಣ 100 ರೂಪಾಯಿಗೆ ಯಾರದ್ದೋ ಹತ್ತಿರ ಇದ್ದ ಅಂದಿದ್ದಾರೆ. ನಮ್ಮ ಅಪ್ಪ-ಅಮ್ಮ ಇನ್ನೊಬ್ಬರ ಬಳಿ ಕೈಚಾಚುವ ರೀತಿ ಬೆಳೆಸಿಲ್ಲ, ದೇವೇಗೌಡರೇ, 23ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟು ಅಂತ ನಿಲ್ಲಿಸಿದ್ದರು. ಡಿ.ಕೆ.ಸುರೇಶ್, ಮಾಜಿ ಸಂಸದ