

ಗಂಗಾಧರ್ ಬೈರಾಪಟ್ಟಣ
ರಾಮನಗರ: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣದ ಮೇಲೆ ಕಣ್ಣು, ಇದಕ್ಕಾಗಿ ಅಬ್ಬರಿಸುತ್ತಿದ್ದಾರೆ. ಅತ್ತ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರೂ ಆಗಿರುವ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕನಕಪುರದ ಮೇಲೆ ಆಸಕ್ತಿ ಇದಕ್ಕಾಗಿ ಸದ್ದಿಲ್ಲದೆ ಆಪರೇಷನ್ ಆರಂಭಿಸಿದ್ದಾರೆ.
ಹೌದು, ಜಿಲ್ಲೆಯಲ್ಲಿ ರಾಜಕೀಯ ಬಿರುಸುಗೊಂಡಿದೆ. ಒಂದೆಡೆ ಕೇಂದ್ರದ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಸಂರ್ಷ ವಯುಕ್ತಿಕ ಮಟ್ಟಕ್ಕೆ ಇಳಿದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಇಬ್ಬರೂ ನಾಯಕರೂ ತಮ್ಮ ಹುದ್ದೆಗಳ ನತೆಯನ್ನು ಮರೆತು ಏಕ ವಚನದಲ್ಲಿಯೇ ವಾಕ್ಸಮರಕ್ಕೆ ಇಳಿದಿದ್ದಾರೆ. ಇದೆಲ್ಲರದ ನಡುವೆಯೇ ಹೃದಯ ತಜ್ಞರೂ ಆದ ಸಂಸದ ಡಾ.ಸಿ.ಎನ್ ಮಂಜುನಾಥ್ ಕನಕಪುರದಲ್ಲಿ ಆಪರೇಷನ್ಗೆ ಇಳಿದಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆ ಬಾಕಿ ಇದೆ. ಲೋಕಸಭೆ ಚುನಾವಣೆ ಮುಗಿಯತ್ತಿದ್ದಂತೆ ಅಖಾಡಕ್ಕೆ ಇಳಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬಹುತೇಕ ಕಳೆದ ಎರಡು ತಿಂಗಳಿಂದಲೂ ಕ್ಷೇತ್ರದಲ್ಲಿ ಅಬ್ಬರಿಸುತ್ತಲೇ ಇದ್ದಾರೆ. ಇದಕ್ಕೆ ಕಾರಣವೂ ಇದೆ, ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಮಹಾತ್ವಾಕಾಂೆಗೆ ಅಗತ್ಯವಾಗಿದ್ದರೂ, ತಮ್ಮ ಮತ್ತು ಎಚ್.ಡಿ ಕುಮಾರಸ್ವಾಮಿ ಅವರ ನಡುವಿನ ಸಂರ್ಷದಲ್ಲಿ ವಿಜಯಪತಾಕೆ ಹಾರಿಸಬೇಕಾದರೆ ಖಂಡಿತವಾಗಿ ಬೊಂಬೆನಾಡು ಕೈ ವಶ ಆಗಲೇಬೇಕು. ಇದರಿಂದಾಗಿ ಇರುವ ಎಲ್ಲಾ ಅವಕಾಶಗಳನ್ನು ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಮತದಾರರು ಮನ ಗೆಲ್ಲಲ್ಲು ಹೊರಟಿದ್ದಾರೆ.
ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್ ಅವರ ಅಬ್ಬರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ಸಹ ಆತಂಕವನ್ನು ತಂದಿದ್ದು, ಕ್ಷೇತ್ರದಲ್ಲಿ ಮುಂದೆನಾಗುವುದೋ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲ ಡಿ.ಕೆ.ಶಿವಕುಮಾರ್ ಅವರು ಎಣಿಸಿದಂತೆ ಕೈ ಗೆಲುವು ಸಾಧಿಸಿದರೆ ಸದ್ಯದ ಮಟ್ಟಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬವನ್ನು ಜಿಲ್ಲೆಯಿಂದ ಹೊರ ಹಾಕಿದಂತೆ ಎನ್ನುವ ಲೆಕ್ಕಾಚಾರವೂ ಇದೆ.
ಒಂದೆಡೆ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಮಾಡುತ್ತಿರುವ ಅಬ್ಬರ ದೆಹಲಿವರೆಗೂ ಮುಟ್ಟಿದ್ದರೂ ಹೃದಯ ತಜ್ಞ ಡಾ.ಸಿ ಎನ್ ಮಂಜುನಾಥ್ ಕನಕಪುರದಲ್ಲಿ ಮಾಡುತ್ತಿರುವ ಸೈಲೆಂಟ್ ಆಪರೇಷನ್ ಕನಕಪುರದ ಕಾಂಗ್ರೆಸ್ ಪಡೆಯನ್ನು ಚಿಂತೆಗೀಡು ಮಾಡಿರುವುದಂತೂ ಸತ್ಯ.
ಕನಕಪುರ ತಾಲೂಕಿಗೆ ಬೇಟಿ ನೀಡುವ ಎಲ್ಲಾ ಅವಕಾಶಗಳನ್ನು ಸಹ ಬಳಕೆ ಮಾಡಿಕೊಳ್ಳುತ್ತಿರುವ ಡಾಕ್ಟರ್ ಸದ್ದಿಲ್ಲದೆ ಡಿಕೆ ಸಹೋದರರಿಗೆ ಟಾಂಗ್ ನೀಡುತ್ತಿದ್ದಾರೆ. ಕನಕಪುರ ಮತ್ತು ಹಾರೋಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಪ್ರಾಭಲ್ಯದ ಜೊತೆಗೆ ಡಿ.ಕೆ ಸಹೋದರರ ಪ್ರಭಾವವೂ ಹೆಚ್ಚಿದೆ. ಈ ಎರಡೂ ತಾಲೂಕುಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಂಡಿರುವ ಡಾಕ್ಟರ್ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಇಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಸ್ವಾತಂತ್ರೊ$್ಯತ್ಸವ ಧ್ವಜಾರೋಹಣ ಮಾಡುತ್ತಿದ್ದರೆ, ಇತ್ತು ಮಂಜುನಾಥ್ ಕನಕಪುರದಲ್ಲಿ ತಾಲೂಕು ಆಢಳಿತದಿಂದ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಇಷ್ಟೇ ಅಲ್ಲದೆ, ಕನಕಪುರದಲ್ಲಿ ತಮ್ಮ ಕಚೇರಿಯನ್ನು ತೆರೆಯುವ ಮೂಲಕ ಸ್ಥಳಿಯರಿಗೆ ಸುಲಭವಾಗಿ ದೊರೆಯುವ ಕೆಲಸವನ್ನು ಮಾಡಿದ್ದಾರೆ.
ವೈಧ್ಯರ ಈ ಎಲ್ಲಾ ಕೆಲಸಗಳಿಗೆ ರಾಜಕೀಯದ ವಾತಾವರನದಲ್ಲಿಯೇ ಮಿಂದೆದಿದ್ದರುವ ಪತ್ನಿ ಅನಸೂಯ ಸಾಥ್ ನೀಡುತ್ತಿರುವುದು ವಿಶೇಷ.
ಸೋಲು ಕೆಲವರನ್ನು ವಿಚಲಿತಗೊಳಿಸುತ್ತದೆ. ಆದರೆ ಲೋಕಸಭೆ ಸೋಲಿನ ನಂತರ ಒಂದಿಷ್ಟು ಬೇಸರದಲ್ಲಿದ್ದ ಮಾಜಿ ಸಂಸದ ಡಿ.ಕೆ ಸುರೇಶ್ ಈಗ ಮೈಕೊಡವಿ ನಿಂತಿದ್ದಾರೆ. ಕನಕಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ರಾಜಕೀಯ ಮತ್ತು ಅಭಿವೃದ್ಧಿ ಕೆಲಸಳಿಗೆ ಗಮನ ನೀಡುತ್ತಿದ್ದಾರೆ. ಇವರಿಗೆ ಕನಕಪುರ ಬಗರ್ ಹುಕುಂ ಸಮಿತಿ ಅಧ್ಯಕ್ಷ ಸ್ಥಾನ ಮತ್ತು ರಾಜರಾಜೇಶ್ವರಿ ನಗರ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಸ್ಥಾನವೂ ದೊರೆತಿದೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಕಳೆದ ಸೋಲು ಮರುಕಳುಹಿಸದಂತೆ ಮಾಡಿಕೊಳ್ಳುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ರಾಮನಗರ ಜಿಲ್ಲೆಯ ಆಢಳಿತದಲ್ಲಿಯೂ ಡಿ.ಕೆ.ಸುರೇಶ್ ಈಗಲೂ ಸಹ ಪ್ರಭಾವಿಯೇ ಉಳಿದಿರುವುದು ಇತ್ತೀಚಿಗೆ ಇವರು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ವೇಳೆಯಲ್ಲಿಯೇ ಸಾಬೀತಾಗಿದೆ.
ಒಟ್ಟಾರೆ ದೇವೇಗೌಡ ಮತ್ತು ಶಿವಕುಮಾರ್ ಕುಟುಂಬದ ನಡುವಿನ ರಾಜಕೀಯ ಸಂರ್ಷ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಸಮರವಾಗಿ ಮಾರ್ಪಟ್ಟಿದೆ. ಇದರಲ್ಲಿ ಯಾರು ಜಯಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.