ಸತೀಶ್​ ಜಾರಕಿಹೊಳಿ ಹೇಳಿಕೆ ಒಪ್ಪುವುದಿಲ್ಲ, ಕೆಪಿಸಿಸಿಯಿಂದ ಸ್ಪಷ್ಟನೆ ಕೇಳುತ್ತೇವೆ: ಡಿಕೆಶಿ

DKS
Published on

ಹುಬ್ಬಳ್ಳಿ: ಹಿಂದು ಎಂದರೆ ಅಶ್ಲೀಲ ಎಂಬ ಅರ್ಥ ಇದೆ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್​ ತಳ್ಳಿ ಹಾಕುತ್ತದೆ. ಈ ಕುರಿತು ಅವರಿಂದ ಸ್ಪಷ್ಟನೆ ಕೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ನಾನು ಸಹ ಹಿಂದು ಧರ್ಮದವನು. ನಾನು ಮತ್ತು ಕಾಂಗ್ರೆಸ್​ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ಅವರ ಹೇಳಿಕೆಯಿಂದ ಕಾಂಗ್ರೆಸ್​ಗೆ ಡ್ಯಾಮೇಜ್​ ಆಗುವುದಿಲ್ಲ ಎಂದರು.

ಹಿಂದು ಎಂದರೆ ಅಶ್ಲೀಲ ಎಂಬ ಅರ್ಥ ಬರುತ್ತೆ ಎಂದ ಸತೀಶ್​ ಜಾರಕಿಹೊಳಿ ವಿರುದ್ಧ ಕೇಸರಿ ಪಡೆ ಆಕ್ರೋಶ ಹೊರಹಾಕಿದೆ. 'ನಾನು ಸ್ವಾಭಿಮಾನಿ ಹಿಂದು' ಎಂಬ ಅಭಿಯಾನ ಶುರು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net