ನಾಳೆಯೇ ವಕೀಲರೊಂದಿಗೆ ಕಾವೇರಿ ನೀರಿನ ಬಗ್ಗೆ ಚರ್ಚಿಸುತ್ತಿದ್ದೇನೆ: ಡಿಕೆಶಿ ಸ್ಪಷ್ಟನೆ

dk shivakumar
Published on

ಬೆಂಗಳೂರು: "ನಾಳೆ ದೆಹಲಿಗೆ ಹೋಗುತ್ತಿದ್ದು, ಅಲ್ಲಿ ನಮ್ಮ ವಕೀಲರನ್ನು ಭೇಟಿಯಾಗಿ ಕಾವೇರಿ ನೀರಿನ ವಿಚಾರವಾಗಿ ಚರ್ಚೆ ನಡೆಸುತ್ತೇನೆ. ಸೆ.1 ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ಸ್ ಬೇಡಿಕೆ ಇಟ್ಟಿದ್ದರು. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿ ನಾವು 3 ಸಾವಿರ ಕ್ಯೂಸೆಕ್ಸ್ ಬಿಡುತ್ತೇವೆ ಎಂದು ಹೇಳಿದ್ದೆವು. ಕೊನೆಗೆ ವಾದ- ವಿವಾದಗಳು ನಡೆದು 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿದ್ದಾರೆ. ಮುಂದಿನ ಸಭೆಯಲ್ಲಿ ಹೇಗೆ ನಮ್ಮ ವಾದ ಮಂಡಿಸಬೇಕು ಎಂದು ಚರ್ಚೆ ನಡೆಸಲಿದ್ದೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಕಾವೇರಿ ನದಿ ನೀರು ವಿಚಾರವಾಗಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡುತ್ತಾ, "ಅವರು ಏನೇ ಸಲಹೆ ಕೊಟ್ಟರು ನಾವು ತೆಗೆದುಕೊಳ್ಳುತ್ತೇವೆ, ಈ ಡ್ಯಾಂಗಳ ಕೀಲಿ ಕೈ ನಮ್ಮ ಬಳಿ ಇದೆ, ಅದನ್ನು ಬೇರೆಯವರ ಕೈಗೆ ಬಿಟ್ಟುಕೊಡುವುದಿಲ್ಲ, ನಮ್ಮ ರೈತರ ಹಿತ ಮುಖ್ಯ ನಮಗೆ ಅದಕ್ಕೆ ಈಗಾಗಲೇ 2 ಬಾರಿ ನೀರು ಬಿಟ್ಟಿದ್ದೇವೆ.

ಬೊಮ್ಮಾಯಿ ಅವರು ರಾಜಕಾರಣ ಮಾಡಬೇಕಲ್ಲ ಅದಕ್ಕೆ ಮಾತನಾಡುತ್ತಾರೆ. ಬಿಜೆಪಿಯ ಮಾಜಿ ನೀರಾವರಿ ಸಚಿವರೊಬ್ಬರು ಯಾವುದೇ ಕಾರಣಕ್ಕು ನೀರು ಬಿಡಬಾರದು ಎಂದು ಹೇಳಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು. ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ಏನಾಯಿತು, ದೇವೆಗೌಡರು ಪ್ರಧಾನಿಗಳಾಗಿದ್ದಾಗ ಏನಾಯಿತು, ಇದೆಲ್ಲಾ ಕಾಲ, ಕಾಲದಿಂದ ನಡೆದುಕೊಂಡು ಬಂದಿರುವುದೇ" ಎಂದು ಹೇಳಿದರು. ಈ ಮೂಲಕ ಮೇಲ್ಮನವಿ ಸಲ್ಲಿಸಬಹುದಿತ್ತು, ಕರ್ನಾಟಕ ಸರ್ಕಾರ ಈ ಕೆಲಸ ಮಾಡಿಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net