

ರಾಮನಗರ : ವಕೀಲರಾಗಿ, ಕಾನೂನು ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅನುಭವವಿದ್ದರೂ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ರಾಮನಗರದ ವಕೀಲರ ಸಂಘಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣವನ್ನು ಹಿಂಪಡೆಯಲು ಸಂಪುಟ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಹಲವಾರು ಸುಪ್ರೀಂಕೋರ್ಟ್ ತೀರ್ಪುಗಳು ನಮ್ಮಕಣ್ಣಮುಂದೆ ಇವೆ. ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್‌ನಲ್ಲಿ ಚರ್ಚೆ ಆಗಿದೆ. ಎರಡು ಅರ್ಜಿ ವಜಾಗೆ ಮನವಿ ಸಲ್ಲಿಸಿದ್ರೂ ಅದು ಆಗಿರಲಿಲ್ಲ. ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಸರ್ಕಾರದ ಏಕಾಏಕಿ ನಿರ್ಧಾರ ತಪ್ಪು. ಕಾನೂನನ್ನು ಧಿಕ್ಕರಿಸಿ, ಕಾನೂನಿಗಿಂತ ನಾವು ದೊಡ್ಡವರು ಎಂದು ಪ್ರದರ್ಶನ ಮಾಡಿಕೊಂಡಿದ್ದಾರೆ.
ಬಡವರಿಗೆ ರಕ್ಷಣೆ ಇಲ್ಲ, ಲೂಟಿ ಮಾಡುವವರಿಗೆ ಕೊಳ್ಳೆ ಒಡೆದವರಿಗೆ ನಮ್ಮ ಸರ್ಕಾರ ಇರುವುದು ಎಂದು ನಿರೂಪಿಸಿದ್ದಾರೆ. ಈ ವಿಚಾರ ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಲಿದೆ ಎಂದು ಪಾಪ ಉಪ ಮುಖ್ಯಮಂತ್ರಿಡಿ.ಕೆ ಶಿವಕುಮಾರ್ ಸಂಪುಟ ಸಭೆಗೂ ಹೋಗಿಲ್ಲ. ಎಂತಹಾ ದೊಡ್ಡತನ ತೋರಿಸಿದ್ದಾರೆ ನೋಡಿ ಇವರ ಸಹಕಾರಕ್ಕೆ ಅಭಿನಂದಿಸಬೇಕು ಎಂದು ವ್ಯಂಗ್ಯವಾಡಿದರು.
ಕಳೆದ 3 ದಿನಗಳ ಹಿಂದೆಯೇ ವಕೀಲರನ್ನುಕರೆದು ಸಭೆ ಮಾಡಿ ಇದರಿಂದ ಯಾವರೀತಿ ರಕ್ಷಣೆ ಪಡೆಯಬೇಕು ಅಂತ ಚರ್ಚೆ ಮಾಡಿದ್ದಾರೆ. ಈ ವಿಷಯವನ್ನು ಮುಂದಿನ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲುಆಗಲ್ಲ. ಸಿಬಿಐನಿಂದ ವಾಪಸ್ಸ್ ತಗೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತಾ.? ಲೋಕಾಯುಕ್ತ ಅಥವಾ ಪೊಲೀಸರು ಇದನ್ನು ಮಾಡಲು ಸಾಧ್ಯವೇ? ಹಿಂದಿನ ಸರ್ಕಾರದ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ. ಇವರು ಈಗ ಸ್ಪೀಕರ್‌ರಿಂದ ಅನುಮತಿ ಪಡೆದಿದ್ದಾರಾ.? ಎಂದು ಪ್ರಶ್ನಿಸಿದರು.
ಇದೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತರದ್ದು ಮಾಡಿ, ಅಕ್ರಮ ಮುಚ್ಚಿಹಾಕಿದ್ರು. ಇದರಲ್ಲಿ ಸಿದ್ದರಾಮಯ್ಯ ನಿಪುಣರು. ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಹಾಕಲು ಹೊರಟಿದ್ದಾರೆಎಂದು ಟೀಕಿಸಿದರು.