

*ಚನ್ನಪಟ್ಟಣ ನಗರಸಭೆಯಲ್ಲಿ ದಳದ 13 ಸದಸ್ಯರು ಕಾಂಗ್ರೆಸ್ ಸೇರ್ಪಡೆ!
* ಉಪಚುನಾವಣೆ ಹೊಸ್ತಿಲಿನಲ್ಲಿ ಮೈತ್ರಿಗೆ ಶಾಕ್
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಉಪಚುನಾವಣೆ ಹೊಸ್ತಿಲಿನಲ್ಲಿರುವ ಚನ್ನಪಟ್ಟಣ ೇತ್ರದಲ್ಲಿ ಜೆಡಿಎಸ್ಗೆ ಕಾಂಗ್ರೆಸ್ ಬಿಗ್ ಶಾಕ್ ನೀಡಿದೆ. ನಗರಸಭೆಯಲ್ಲಿ ಜೆಡಿಎಸ್ ಅನ್ನು ಬಹುತೇಕ ಖಾಲಿ ಮಾಡಿಸುವ ಮೂಲಕ ಕೈ ಚಳಕ ತೋರಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ೇತ್ರದ ಶಾಸಕ ಸ್ಥಾನಕ್ಕೆ ಸದ್ಯದಲ್ಲೆ ಉಪ ಚುನಾವಣೆ ನಡೆಯಲಿದ್ದು, ಒಂದೆಡೆ ಮೈತ್ರಿ ಪದಲ್ಲಿ ಟಿಕೆಟ್ಗಾಗಿ ಪೈಪೋಟಿ ಆರಂಭಗೊಂಡಿದೆ. ಇದರ ನಡುವೆಯೇ ಡಿ.ಕೆ.ಸಹೋದರರು ಜೆಡಿಎಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಚನ್ನಪಟ್ಟಣ ನಗರಸಭೆಯ ಬಹುತೇಕ ಜೆಡಿಎಸ್ ಸದಸ್ಯರನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆಯ 16 ಜೆಡಿಎಸ್ ಸದಸ್ಯರ ಪೈಕಿ 13 ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗೆ ಪತ್ರ ಬರೆದು, ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರೆಂದು ೂಷಣೆ ಮಾಡಿಕೊಂಡಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಸದಸ್ಯರಾಗಿ ಆಯ್ಕೆಯಾಗಿದ್ದ 16 ನಗರಸಭಾ ಸದಸ್ಯರ ಪೈಕಿ 13 ನಗರಸಭಾ ಸದಸ್ಯರು ಇನ್ನು ಮುಂದೆ ಕಾಂಗ್ರೆಸ್ ನಗರಸಭಾ ಸದಸ್ಯರು ಎಂದು ಗುರುತಿಸಿಕೊಳ್ಳಲು ಅರ್ಹರು ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸೆ.17 ರಂದು ಆದೇಶ ಹೊರಡಿಸಿದ್ದಾರೆ. ಜೆಡಿಎಸ್ನ 16 ಸದಸ್ಯರಲ್ಲಿ 13 ಮಂದಿ ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಲ್ ಅಥಾರಿಟೀಸ್ (ಪ್ರೋಬಿಷನ್ ಆ್ ಡಿಫೆನ್) ಕಾಯ್ದೆ, 1987ರ ಕಲಂ 3(ಬಿ)(2ಎ) ಅಡಿಯಂತೆ ನಗರಸಭೆಯಲ್ಲಿ ಆಯ್ಕೆಯಾದ ಯಾವುದೇ ಪದ ಸದಸ್ಯರಲ್ಲಿ ಶೇ. 2/3 ಮೀರಿದ ಸದಸ್ಯರು ಪಾಂತರ ಮಾಡಿದರೆ, ಅವರನ್ನು ಆ ಪಕ್ಕೆ ವಿಲೀನರಾಗಿದ್ದಾರೆ ಎಂದು ಪರಿಗಣಿಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್ನ 13 ಸದಸ್ಯರು ನಗರಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಎಂದು ಗುರುತಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಾದೇಶದಲ್ಲಿ ತಿಳಿಸಿದ್ದಾರೆ.
==========================================
ಚನ್ನಪಟ್ಟಣ ನಗರಸಭೆಯಲ್ಲಿ 31 ಸದಸ್ಯ ಬಲವಿದ್ದು, ಜೆಡಿಎಸ್ 16, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 7 ಹಾಗೂ ಒರ್ವ ಪೇತರ ಸದಸ್ಯೆ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಅವಧಿಯಲ್ಲಿ ಜೆಡಿಎಸ್ ಸುಗಮವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ನಡುವೆ ಲೋಕಸಭೆ ಚುನಾವಣೆಗೂ ಮುಂಚೆ ಜೆಡಿಎಸ್ನ ನಗರಸಭಾ ಅಧ್ಯ ಪಿ.ಪ್ರಶಾಂತ್ ಸೇರಿ 9 ಮಂದಿ ಸದಸ್ಯರು ಹಾಗೂ ಒರ್ವ ಪೇತರ ಸದಸ್ಯ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಹತ್ತು ಮಂದಿ ನಮ್ಮನ್ನು ಕಾಂಗ್ರೆಸ್ ಸದಸ್ಯರು ಎಂದು ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದರೊಂದಿಗೆ, ಚುನಾವಣೆಯ ನಂತರವೂ 4 ಸದಸ್ಯರು ಅವರ ದಾರಿಯನ್ನೇ ಅನುಸರಿಸಿದ್ದು, ಒಟ್ಟು 14 ಮಂದಿ ಸದಸ್ಯರ ಕಾಂಗ್ರೆಸ್ ವಿಲೀನತೆಗೆ ಜಿಲ್ಲಾಧಿಕಾರಿಗಳು ಅಸ್ತು ಎಂದಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಏಳು ಸದಸ್ಯರು ಆಯ್ಕೆಯಾಗಿದ್ದರು. ತದನಂತರ ನಡೆದ ಪಾಂತರದಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 23 ಆಗಿದೆ. 13 ಜೆಡಿಎಸ್ ಸದಸ್ಯರು, ಓರ್ವ ಪೇತರ ಸದಸ್ಯೆ ಜತೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಇಬ್ಬರು ಸದಸ್ಯರು ಕಾಂಗ್ರೆಸ್ ವಲಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಚನ್ನಪಟ್ಟಣ ನಗರಸಭೆ ಕಾಂಗ್ರೆಸ್ ಮಯವಾಗಿದೆ.
ಲೋಕಸಭಾ ಚುನಾವಣೆ ಮುಂಚೆಯೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಪದ 9 ಸದಸ್ಯರ ವಿರುದ್ಧ ಜೆಡಿಎಸ್ ಅನರ್ಹತೆಯ ಕಾನೂನು ಅಸ ಪ್ರಯೋಗ ಮಾಡಲು ನಿರ್ಧರಿಸಿತ್ತು. ಆದರೆ, ಪಾಂತರ ಮಾಡಿದ್ದ 9 ಸದಸ್ಯರ ವಿರುದ್ಧ ಯಾವುದೇ ವಿಪ್ ಉಲ್ಲಂನೆ ಮಾಡಿದ ಸಾ ಇಲ್ಲದ ಕಾರಣ ಮುಂದಿನ ಕ್ರಮಕ್ಕಾಗಿ ಚಿಂತನೆ ನಡೆಸುತ್ತಿದ್ದರು. ಇದರ ನಡುವೆಯೇ 9 ಸದಸ್ಯರ ಜತೆಗೆ ಇನ್ನೂ ನಾಲ್ವರು ಸದಸ್ಯರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಒಟ್ಟು 13 ಸದಸ್ಯರು ಕಾಂಗ್ರೆಸ್ ಸದಸ್ಯರೆಂದು ಕೋರಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪುರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಂತರಿಗಳು ಅನರ್ಹತೆ ತೂಗುಗತ್ತಿಯಿಂದ ಪಾರಾಗಿದ್ದಾರೆ.
ಒಂದೆಡೆ ಚನ್ನಪಟ್ಟಣ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರನ್ನು ದೊಡ್ಡಮಟ್ಟದಲ್ಲಿ ಪದ ತೆಕ್ಕೆಗೆ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇದರೊಂದಿಗೆ ಬಿಜೆಪಿ ಸದಸ್ಯರನ್ನು ಸೆಳೆಯುವ ಮೂಲಕ ಬಿಜೆಪಿಗೂ ಶಾಕ್ ನೀಡಿದೆ. ಈಗಾಗಲೇ ಇಬ್ಬರು ಬಿಜೆಪಿ ಸದಸ್ಯರು ಕಾಂಗ್ರೆಸ್ ಪಾಳಯದಲ್ಲಿದ್ದು, ಇದರೊಂದಿಗೆ, ಇನ್ನಿಬ್ಬರು ಮಹಿಳಾ ಸದಸ್ಯರಿಗೂ ಗಾಳ ಹಾಕಲಾಗಿದೆ. ಒಟ್ಟಾರೆ, ಉಪಚುನಾವಣೆ ಹೊಸ್ತಿಲಿನಲ್ಲಿ ಮೈತ್ರಿ ಪಗಳಿಗೆ ಕಾಂಗ್ರೆಸ್ ನಗರಸಭೆಯ ಮೂಲಕ ಬಿಗ್ ಟಕ್ಕರ್ ನೀಡಿರುವುದಂತೂ ಸತ್ಯ. ಇದಕ್ಕೆ ವಿರುದ್ಧವಾಗಿ ಮೈತ್ರಿ ಪಾಳೆಯ ಯಾವ ಟಾಂಗ್ ನೀಡಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.