

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ನವೀನ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಸೋದರಳಿಯ ನವೀನ್ ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದನ್ನೇ ನೆಪಮಾಡಿಕೊಂಡ ಪುಂಡರು ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ದಾಂಧಲೆ ನಡೆಸಿ ಪೊಲೀಸ್ ಠಾಣೆ, ಶಾಸಕರ ನಿವಾಸ, ಕಂಡ ಕಂಡ ವಾಹನಕ್ಕೆಲ್ಲ ಬೆಂಕಿ ಇಟ್ಟು ಗಲಭೆ ಸೃಷ್ಟಿಸಿದ್ದರು.
'ಈ ಕೃತ್ಯ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದದ್ದನ್ನೇ ನವೀನ್ ಶೇರ್ ಮಾಡಿಕೊಂಡಿದ್ದರು. ಇದು ಇಷ್ಟೊಂದು ಗಂಭೀರ ಆಗಲಿದೆ ಎಂಬ ಅರಿವೂ ಅವರಿಗೆ ಇರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಆ ಪೋಸ್ಟ್ ಅನ್ನು ಕೂಡಲೇ ಡಿಲೀಟ್ ಮಾಡಿದ್ದಾರೆ' ಎಂದು ನವೀನ್ ಪರ ವಕೀಲರು ವಾದ ಮಂಡಿಸಿದ್ದರು.
ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆ ವೇಳೆ ಪೊಲೀಸ್ ಕಸ್ಟಡಿಯಲ್ಲಿ ನವೀನ್ ಇದ್ದ. ಮಹಜರ್ಗೆಂದು ಆತನನ್ನು ಕರೆತರುವ ತನಕ ಹೊರಜಗತ್ತಿನ ಮಾಹಿತಿ ಇರಲಿಲ್ಲ. ಸುಟ್ಟು ಕರಕಲಾಗಿದ್ದ ಮನೆಯನ್ನ ಕಂಡ ಆತ ಬಿಕ್ಕಿಬಿಕ್ಕಿ ಅತ್ತಿದ್ದ. ಆ ಒಂದು ಪೋಸ್ಟ್ ಇಂತಹ ದೊಡ್ಡ ಆಘಾತಕ್ಕೆ ಕಾರಣ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಕಣ್ಣೀರು ಸುರಿಸಿದ್ದ.