

ಕಡಬ: ಧಾರ್ಮಿಕ ಕಟ್ಟುಪಾಡುಗಳಿಂದ ಕೂಡಿದ ನಮ್ಮ ಹಿರಿಯರ ಆಚರಣೆಗಳ ತಿರುಳನ್ನು ಅರಿತು ಯುವ ಜನತೆ ಆಸಕ್ತಿಯಿಂದ ಮುನ್ನಡೆಸಬೇಕು ಎಂದು ಉದ್ಯಮಿ ಚಂದ್ರಶೇಖರ ಬರೆಪ್ಪಾಡಿ ಹೇಳಿದರು.
ಕುದ್ಮಾರು ದೇವರಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ದೇವರಗುಡ್ಡೆ ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ್ ಕೆ.ಎನ್.ಕಾರ್ಲಾಡಿ, ನಿರ್ಮಲ ಕೇಶವ ಗೌಡ ಅಮೈ, ಶೀನಪ್ಪ ಗೌಡ ಕಂಡಿಗ, ದಾಮೋದರ ಗೌಡ, ಬಾಬು ಗೌಡ ಉಪಸ್ಥಿತರಿದ್ದರು.
ಅನಿಲ್ ಕಂಡಿಗ ಪ್ರಾಸ್ತಾವಿಸಿದರು. ವತ್ಸಲಾ ಬನಾರಿ ಸ್ವಾಗತಿಸಿದರು. ರೇವತಿ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಮಾತನಾಡಿದರು. ರಾಜೇಶ್ ಗೌಡ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುರೇಶ್ ಪಡಿಪಂಡ, ಬೆಳಿಯಪ್ಪ ಗೌಡ ಚೌಕಿಮಠ, ಮಾಧವ ಕುದ್ಮಾರು, ಹರ್ಷಿತ್ ಮುದ್ಯ, ಗೋಪಾಲ ಸುವರ್ಣ, ರಾಮಚಂದ್ರ ಕೊಡೆಂಕಿರಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಜ್ಞಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅಶ್ವಿನ್ ಸ್ವಾಗತಿಸಿದರು. ಶರತ್ ಕುಮಾರ್ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಅನಿಲ್ ಕಂಡಿಗ ಕಾರ್ಯಕ್ರಮ ನಿರೂಪಿಸಿದರು.