

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ಅಭಿವೃದ್ಧಿ ಮತ್ತು ಜ್ಞಾನದ ಸಂಕೇತವಾದ ಬೆಳಕನ್ನು ದೀಪಾವಳಿ ಆಚರಣೆ ಮೂಲಕ ಪಸರಿಸಿ ಸರ್ವಧರ್ಮ ಸಮಭಾವದಿಂದ ಆಚರಿಸುವ ಕಾರ್ಯ ಲಯನ್ಸ್ ವಿಶೇಷತೆಯಾಗಿದೆ ಎಂದು ಲಯನ್ಸ್ ಜಿಲ್ಲೆ 317ಡಿ ಗವರ್ನರ್ ಕುಡ್ಪಿ ಅರವಿಂದ ಶೆಣೈ ಹೇಳಿದರು.
ಹಳೆಯಂಗಡಿ ಬಿಲ್ಲವ ಭವನದಲ್ಲಿ ಭಾನುವಾರ ಲಯನ್ಸ್ ಇಂಟರ್ನ್ಯಾಶನಲ್ ಜಿಲ್ಲಾಮಟ್ಟದ ದೀಪಾವಳಿ ಹಬ್ಬ ‘ದೀಪಾಂಜಲಿ’ ಉದ್ಘಾಟಿಸಿ ಮಾತನಾಡಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಮಕ್ಕಳಿಗೆ ನಮ್ಮ ಧಾರ್ಮಿಕ ಸಂಪ್ರದಾಯಗಳ ವೈಜ್ಞಾನಿಕ ಮಹತ್ವ ಸಹಿತ ಸಂಸ್ಕೃತಿ ಸಂಸ್ಕಾರ ತಿಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಯೋಜನಕಾರಿ ಎಂದರು.
ಅರವಿಂದ ಶೆಣೈ ದಂಪತಿ, ದೀಪಾಂಜಲಿ ಮುಖ್ಯ ಸಂಯೋಜಕ ಚಂದ್ರಶೇಖರ್ ನಾನಿಲ್, ಜಯಶ್ರೀ ನಾನಿಲ್ ದಂಪತಿ, ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ಕೋಶಾಧಿಕಾರಿ ಎಂ. ಬಾಲಕೃಷ್ಣ ಹೆಗ್ಡೆೆ, ಕಾರ್ಯದರ್ಶಿ ಸುದರ್ಶನ್ ಪಡಿಯಾರ್, ಜ್ಯೋತಿ ಎಸ್. ಶೆಟ್ಟಿ, ಗೋವರ್ಧನ ಶೆಟ್ಟಿ, ತಾರಾನಾಥ್, ಸಬಿತಾ ತಾರಾನಾಥ್, ಜ್ಯೋತಿ ಎಸ್. ಶೆಟ್ಟಿ, ಲೋಕೇಶ್ ಉಳ್ಳಾಲ್, ಮನೋರಂಜನ್ ಕೆ.ಆರ್, ಮೋಹನ್ ಎಸ್. ಸುವರ್ಣ, ನ್ಯಾನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.
ಸೇವಾ ಕಾರ್ಯಕ್ರಮದ ಬಗ್ಗೆ ರಮೇಶ್ ಬಂಗೇರ ಮಾಹಿತಿ ನೀಡಿದರು. ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಹಳೆಯಂಗಡಿಯ ಪೂಜಾ ಫ್ರೆಂಡ್ಸ್ ಸಂಸ್ಥೆಗೆ 50 ಸಾವಿರ ರೂ. ಧನ ಸಹಾಯ ನೀಡಲಾಯಿತು. ಬಳಿಕ ವಿವಿಧ ಸ್ಪರ್ಧೆಗಳು ಆಯೋಜನೆಗೊಂಡವು. ಪಂಚಮಿ ಪ್ರಾರ್ಥಿಸಿದರು. ಚಂದ್ರಶೇಖರ ನಾನಿಲ್ ಸ್ವಾಗತಿಸಿದರು. ಉಷಾ ಮನೋಜ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್, ಪ್ರಶಾಂತ್ ಶೆಟ್ಟಿ, ಯಾದವ ದೇವಾಡಿಗ ನಿರೂಪಿಸಿದರು..