ಅಧ್ಯಕ್ಷರಾಗಿ ದಿವ್ಯನಾಥ ಶೆಟ್ಟಿ ಕಾವು ಆಯ್ಕೆ

3
Published on

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ದಿವ್ಯನಾಥ್ ಶೆಟ್ಟಿ ಕಾವು ಆಯ್ಕೆಗೊಂಡಿದ್ದಾರೆ. ಕಾವು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸಾಮಾನ್ಯ ಸ್ಥಾನದಿಂದ ದಿವ್ಯನಾಥ್ ಶೆಟ್ಟಿ ಕಾವು, ರವಿರಾಜ್ ರೈ, ಅಮ್ಮು ರೈ, ಚಂದ್ರಶೇಖರ್ ಬಲ್ಯಾಯ, ರವೀಂದ್ರ ಪೂಜಾರಿ, ಮಹಿಳಾ ಮೀಸಲು ಸ್ಥಾನದಿಂದ ನವೀನಕುಮಾರಿ, ಸುಮಲತಾ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಸ್ಥಾನದಿಂದ ಅಂಬೋಡಿ, ಅರ್ಚಕ ಸ್ಥಾನದಿಂದ ಶಿವಪ್ರಸಾದ್ ಕಡಮಣ್ಣಾಯ ಆಯ್ಕೆಗೊಂಡಿದ್ದರು. ದೇವಸ್ಥಾನ ಆಡಳಿತಾಧಿಕಾರಿ ಗೋಪಾಲ ಅಧ್ಯಕ್ಷತೆಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆಯಲ್ಲಿ ದಿವ್ಯನಾಥ ಶೆಟ್ಟಿ ಅವರನ್ನು ಸರ್ವಾನುಮತದಿಂದ ಎರಡನೇ ಬಾರಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆಡಳಿತಾಧಿಕಾರಿ ಗೋಪಾಲ್ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net