

ವಿಟ್ಲ: ಅಂಕ ಗಳಿಸಿ, ಉದ್ಯೋಗ ಪಡೆದು ಹಣ ಸಂಪಾದಿಸುವುದೆ ಮುಖ್ಯ ಉದ್ದೇಶವಾಗಿರದೆ ನೈತಿಕತೆ, ಪ್ರಾಮಾಣಿಕತೆಯಿಂದ ಆದರ್ಶ ಜೀವನವನ್ನು ನಡೆಸುವಂತವರಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶ್ರೀ ಗುರು ಕಲಾವೇದಿಕೆಯಲ್ಲಿ ಜರುಗಿದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಶೇ.೧೦೦ ಫಲಿತಾಂಶ ಪಡೆಯುವುದರ ಜತೆಗೆ ಜೀವನದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡಬೇಕು. ತಂದೆ, ತಾಯಿ, ಗುರುಗಳಿಗೆ ತಲೆಬಾಗಿಸಿದವರು ಸಮಾಜದಲ್ಲಿ ಇತರರ ಮುಂದೆ ತಲೆಬಾಗಿಸುವ ಪ್ರಮೇಯ ಬರಬಾರದು. ಸಚ್ಚಾರಿತ್ರ್ಯವಂತ ಪ್ರಜೆಗಳಾಗಿ ಎಂದರು.
ಸಾಽ ಮಾತಾನಂದಮಯೀ ವಿದ್ಯಾರ್ಥಿಗಳ ಮುಂದಿನ ಪದವಿ ಶಿಕ್ಷಣಕ್ಕೆ ಶುಭಾಶೀರ್ವಾದಗೈದರು. ಶಿಕ್ಷಕ ಶೇಖರ್ ಶೆಟ್ಟಿ ಬಾಯಾರು, ಅನಿತಾ, ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಕಿಶನ್ ಸ್ವಾಗತಿಸಿದರು. ಪ್ರಾಪ್ತಿ ವಂದಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು.