

ಬಂಟ್ವಾಳ: ಬಿ.ಸಿ.ರೋಡು -ಸುರತ್ಕಲ್ ಚತುಷ್ಪಥ ಹೆದ್ದಾರಿಯ ಡಿವೈಡರ್‌ಗಳ ಮಧ್ಯೆ ಬೆಳೆದಿರುವ ಹುಲ್ಲು, ಕಳೆಗಿಡಗಳನ್ನು ಹಾಗೂ ರಸ್ತೆಯಂಚಿನಲ್ಲಿದ್ದ ಹೂಳು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ. ತುಂಬೆ ಬಳಿಯಲ್ಲಿ ಜೆಸಿಬಿಯ ಮೂಲಕ ಕೆಲಸ ನಡೆಯುತ್ತಿದ್ದು, ರಸ್ತೆ ವಿಭಾಜಕ ಸ್ವಚ್ಛಗೊಳ್ಳುತ್ತಿದೆ.
ಕಳೆದ ವರ್ಷ ಬಿ.ಸಿ.ರೋಡಿನ ಶಾಂತಿಅಂಗಡಿ ಬಳಿ ಡಿವೈಡರ್ ಮಧ್ಯೆಯಿಂದ ಕಳೆಗಿಡಗಳು ಹಾಗೂ ಹೂಳನ್ನು ತೆರವುಗೊಳಿಸಿ ರಸ್ತೆ ಮಧ್ಯೆಯೇ ಬಿಟ್ಟು ಹೋಗಿ ಮಳೆಗೆ ಅದೆಲ್ಲವೂ ರಸ್ತೆಗೆ ಚೆಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಭಾರಿ ತೆರವುಗೊಂಡ ತ್ಯಾಜ್ಯ, ಕಳೆಗಿಡಗಳು ರಸ್ತೆಯಲ್ಲಿ ಉಳಿಯದೆ ಸಂಪೂರ್ಣ ಸ್ವಚ್ಛಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.