

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತುಂಬೆ ವಲಯದ ನರಿಕೊಂಬು ಕಾರ್ಯಕ್ಷೇತ್ರದ ಎ ಮತ್ತು ಬಿ ಒಕ್ಕೂಟದ ಸದಸ್ಯರಿಗೆ ಸದಸ್ಯರು ಸಂಘಗಳಲ್ಲಿ ಮಾಡಿದ ವ್ಯವಹಾರಗಳಿಗೆ ಸಿಗುವ ಲಾಭಾಂಶ ವಿತರಣಾ ಕಾರ್ಯಕ್ರಮ ನರಿಕೊಂಬು ಕಾರ್ಯಕ್ಷೇತ್ರದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಮಂಗಳ ಗೌರಿ ಹಾಗೂ ಶಿವಶಕ್ತಿ ಸಂಘಕ್ಕೆ ಲಾಭಾಂಶದ ಪತ್ರ ವಿತರಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿ ದೃಷ್ಟಿಯಲ್ಲಿ ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಗಳು ಬಹಳ ಪರಿಣಾಮ ಬೀರಿದೆ. ಗ್ರಾಮದ ಶಾಲೆಗಳಿಗೆ, ದೇವಸ್ಥಾನಗಳಿಗೆ, ಸಮುದಾಯದ ಇನ್ನಿತರ ಕಾರ್ಯಗಳಿಗೆ ಯೋಜನೆಯಿಂದ ಸೇವಾ ರೂಪದಲ್ಲಿ ದೊರೆಯುವ ಅನುದಾನ ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಮೂಲಕ ಮಹಿಳೆಯರು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಕಲ್ಪಿಸಿ ಅಭಿವೃದ್ಧಿ ಹೊಂದಿದ್ದಾರೆ ಎಂದರು.
ಪ್ರಗತಿಪರ ಕೃಷಿಕ ಪ್ರೇಮನಾಥ್ ಶೆಟ್ಟಿ ಅಂತರ, ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ, ಉಪಾಧ್ಯಕ್ಷೆ ವಿಮಲ, ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷ ಜಯಂತ್ ಪಲ್ಲತ್ತಿಲ್ಲ, ನರಿಕೊಂಬು ಕಾರ್ಯಕ್ಷೇತ್ರದ ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಕುಸುಮಾವತಿ ಹಾಗೂ ಪ್ರತಿಭಾ, ಸದಸ್ಯರು ಉಪಸ್ಥಿತರಿದ್ದರು.