ಬಂಪರ್ ಬಹುಮಾನ ಲಕ್ಕಿ ಡ್ರಾ  -- ವಿಜಯವಾಣಿ ವಿಜಯೋತ್ಸವ ಶಾಪಿಂಗ್ ಉತ್ಸವ  -- 11 ರಂದು ಫಲಿತಾಂಶ

JAR_7621
Published on

ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬಗಳ ಅಂಗವಾಗಿ ವಿಜಯವಾಣಿ ಆಯೋಜಿಸಿದ 12ನೇ ವರ್ಷದ ‘ವಿಜಯೋತ್ಸವ- 2024’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾ ನಗರದ ಕೂಳೂರಿನಲ್ಲಿರುವ ‘ವಿಜಯವಾಣಿ’ ಮಂಗಳೂರು ಬ್ಯೂರೋ ಮುಖ್ಯ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿತು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮುಖ್ಯ ಅತಿಥಿಯಾಗಿ ಮಾತನಾಡಿ, ಹಬ್ಬಗಳ ಸಂದರ್ಭ ಖರೀದಿಯ ಮೂಲಕ ಗ್ರಾಹಕರಿಗೆ ಅದೃಷ್ಟ ಪರೀಕ್ಷೆ ಮಾಡಲು ವಿಜಯೋತ್ಸವ ವೇದಿಕೆಯಾಗಿದೆ. ಹಿಂದೆ ಮ್ಯಾಗಸಿನ್‌ಗಳಲ್ಲಿ ಮಾತ್ರ ಇಂತಹ ಲಕ್ಕಿ ಡ್ರಾ ನಡೆಯುತ್ತಿದ್ದು, ಪ್ರಸ್ತುತ ದಿನ ಪತ್ರಿಕೆಗಳು ಕೂಡಾ ಆರಂಭಿಸಿ, ಉದ್ಯಮಿಗಳಿಗೆ ಹಾಗೂ ಗ್ರಾಹಕರ ನಡುವೆ ಕೊಂಡಿಯಾಗಿರುವುದು ಶ್ಲಾಘನೀಯ. ವಿಜಯವಾಣಿ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, ಓದುಗರ ಜತೆ ವಿವಿಧ ಕಾರ್ಯಕ್ರಮಗಳ ಮೂಲಕ ಪರಸ್ಪರ ಗಟ್ಟಿಯಾದ ಬಾಂಧವ್ಯ ಹೊಂದಿದೆ. ವಿಆರ್‌ಎಲ್ ಸಮೂಹ ಸಂಸ್ಥೆಯ ಯಶಸ್ಸಿನ ಪ್ರಯಾಣ ಮುಂದುವರಿಯಲಿ ಎಂದು ಹಾರೈಸಿದರು.

  ವಿಭಿನ್ನ ಪ್ರಯೋಗದಿಂದ ಯಶಸ್ಸು

ಉದ್ಯಮಗಳು ಯಶಸ್ಸು ಗಳಿಸಬೇಕಾದರೆ ವಿಭಿನ್ನ ಚಿಂತನೆ, ಪ್ರಯೋಗಗಳು ಅವಶ್ಯ. ವಿಜಯವಾಣಿ ಪತ್ರಿಕೆ ವಿಜಯೋತ್ಸವದ ಮೂಲಕ ಅವರಿಗೆ ಬೆಂಬಲ ನೀಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯ ಎಂದು ಮುಖ್ಯ ಅತಿಥಿಯಾಗಿದ್ದ ಕಾರ್ಕಳದ ಸಮಾಜ ಸೇವಕಿ, ಶಿಕ್ಷಕಿ ಡಾ.ಕಾಂತಿ ಹರೀಶ್ ಹೇಳಿದರು.

ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್.ವಾಗ್ಳೆ, ಮಾರುಕಟ್ಟೆ ವಿಭಾಗ ಮುಖ್ಯಸ್ಥ ನವೀನ್ ಶೆಟ್ಟಿ, ಮೈಸೂರು ಬ್ಯೂರೋದ ಮಾರುಕಟ್ಟೆ ಅಧಿಕಾರಿ ಬಿಪಿನ್ ಮೊದಲಾದವರು ಉಪಸ್ಥಿತರಿದ್ದರು. ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ ಕಾರ್ಯಕ್ರಮ ನಿರ್ವಹಿಸಿದರು.

2500 ಬಹುಮಾನಗಳು

11ರಂದು ಫಲಿತಾಂಶ

ಲಕ್ಕಿ ಡ್ರಾದಲ್ಲಿ ರಾಜ್ಯಮಟ್ಟದಲ್ಲಿ 500ಕ್ಕೂ ಅಧಿಕ ಮಳಿಗೆಗಳು ವಿಜಯೋತ್ಸವದಲ್ಲಿ ಭಾಗಿಯಾಗಿವೆ. ಕರ್ನಾಟಕದಾದ್ಯಂತ ರೆಫ್ರಿಜರೇಟರ್, ಟಿವಿ, ದ್ವಿಚಕ್ರ ವಾಹನ, ವಾಷಿಂಗ್ ಮೆಶಿನ್, ಚಿನ್ನ, ಬೆಳ್ಳಿಯ ನಾಣ್ಯಗಳು ಸಹಿತ ಒಟ್ಟು 2,500 ಬಹುಮಾನಗಳಿವೆ. ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳು ಒಳಗೊಂಡಿರುವ ಮಂಗಳೂರು ಬ್ಯೂರೋ ಮಟ್ಟದಲ್ಲಿ 188 ಬಹುಮಾನಗಳಿವೆ. ರಾಜ್ಯ ಮಟ್ಟದಲ್ಲಿ 7 ಕಾರು ಬಂಪರ್ ಬಹುಮಾನಗಳಿವೆ. ಬಹುಮಾನ ಫಲಿತಾಂಶ ಡಿ.11ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net