ಅಪನಂಬಿಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳು

gan (3)
Published on

ಕುಂದಾಪುರ: ಯಾವುದೇ ಧರ್ಮಗಳ ನಡುವೆ ದ್ವೇಷ ಸೂಸುವ ಬೋಧನೆ ಧಾರ್ಮಿಕವಾಗಿ ಇಲ್ಲ. ಹಾಗಿದ್ದರೂ ಅಪನಂಬಿಕೆಯಿಂದ ಇಂತಹ ಕೆಲಸಗಳಾಗುತ್ತಿವೆ. ಸವಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಿಂದೆಂದೂ ಇಲ್ಲದ ಧರ್ಮಗಳ ನಡುವಿನ ದ್ವೇಷ ಇಂದು ಎದ್ದು ಕಾಣುತ್ತಿದೆ. ಮನುಷ್ಯರ ನಡುವೆ ಅಸಹನೆ, ದ್ವೇಷ ಕಾಣಿಸುತ್ತಿದೆ ಎಂದು ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫೀ ಸಅದಿ ಹೇಳಿದರು.

ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದ ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಸುನ್ನೀ ಯುವಜನ ಸಂದಿಂದ ಸೋಮವಾರ ನಡೆದ ಸೌಹಾರ್ದ ಸಂಚಾರ ಸವಾರಂಭದಲ್ಲಿ ವಾತನಾಡಿದರು.

ಬ್ರಹ್ಮಾವರದ ಚರ್ಚ್‌ನ ಧರ್ಮಗುರು ಫಾಣ ನೋವೆಲ್, ಕನ್ನಡದ ಮೊದಲ ಪತ್ರಿಕೆ, ಮೊದಲ ನಿಂಟು ಪ್ರಕಟಿಸಿದ್ದು ಕ್ರೈಸ್ತರು. ಅವರು ಎಂದೂ ದ್ವೇಷ ಬಯಸಿದವರಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಜೋಗಿಮನೆ ಟ್ರಸ್ಟ್ ಹಲಗೇರಿ ವಸಂತನಾಥ್ ಗುರೂಜಿ, ಎಲ್ಲ ಧರ್ಮಗಳ ಸಹಿಷ್ಣುವಾಗಿರಬೇಕು. ಯಾವುದೇ ಧರ್ಮದ ಕುರಿತು ಅಪನಂಬಿಕೆ ಬೇಡ ಎಂದರು.

ಸೌಹಾರ್ದ ಸಂಚಾರಕ್ಕೆ ಸೈಯದ್ ಕೋಟೇಶ್ವರ ತಂಳ್ ಝಿಯಾರತ್ ಮೂಲಕ ಚಾಲನೆ ನೀಡಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಆಶಯ ಭಾಷಣ ವಾಡಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರಳೆ, ಪತ್ರಕರ್ತ ಶಶಿಧರ್ ಹೆವ್ಮಾಡಿ, ಸಿಪಿಐಮ್‌ನ ಚಂದ್ರಶೇಖರ ದೇವಾಡಿಗ, ಮಹಾಬಲ ವಡೇರಹೋಬಳಿ, ಕೆಥೋಲಿಕ್ ಸಭಾ ಕುಂದಾಪುರ ಅಧ್ಯಕ್ಷ ವಿಲ್ಸನ್ ಅಲ್ಮೆಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ ಉಪಸ್ಥಿತರಿದ್ದರು. ಎಸ್‌ವೈಎಸ್ ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಇಲ್ಯಾಸ್ ಸ್ವಾಗತಿಸಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಅಬೂ ಮುಹಮ್ಮದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net