

ಕುಂದಾಪುರ: ಮುಂಬೈ ವಾಲ್ಕೇಶ್ವರದಲ್ಲಿರುವ ಕವಳೇ ಮಠ ಶನಿವಾರ ಗುರು ಸಮಾಗಮಕ್ಕೆ ಸಾಕ್ಷಿಯಾಯಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಾಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಮುಂಬೈ ವಾಲ್ಕೇಶ್ವರದಲ್ಲಿರುವ ಕವಳೇ ಮಠ ಭೇಟಿ ನೀಡಿದರು.
ಕವಳೇ ಮಠದಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಕವಳೇ ಮಾಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಗೋಕರ್ಣ ಮಠಾಧೀಶರನ್ನು ಸ್ವಾಗತಿಸಿದರು. ಉಭಯ ಗುರುವರ್ಯರು 45 ನಿಮಿಷಗಳ ಕಾಲ ಸಾರಸ್ವತ ಸಮಾಜದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಆಶೀರ್ವಚನ ನೀಡಿದರು. ಉಭಯ ಸ್ವಾಮೀಜಿಗಳ ಸಮಕ್ಷಮದಲ್ಲಿ ಗೋಕರ್ಣ ಮಠದ 550 ಸ್ಥಾಪನ ವರ್ಷದ ಅಂಗವಾಗಿ ನಡೆಯುವ 550 ಕೋಟಿ ರಾಮನಾಮ ಜಪದ ಸಂಧರ್ಭದಲ್ಲಿ ಭಕ್ತರು ಶ್ರೀರಾಮ ನಾಮ ತಾರಕ ಮಂತ್ರ ಪಠಣೆ ಮಾಡಿದರು. ಉಭಯ ಮಠಗಳ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.