ಜಿಲ್ಲಾ ಪ್ರವಾಸೋದ್ಯಮಕ್ಕೆ ಬೇಕಿದೆ ಬೂಸ್ಟ್​

savanadurga
Published on

* ರಾಜಧಾನಿಗೆ ಹೊಂದಿಕೊಂಡಿದ್ದರೂ ಇಲ್ಲ ಪ್ರಗತಿ

ಗಂಗಾಧರ್​ ಬೈರಾಪಟ್ಟಣ ರಾಮನಗರ

ಪ್ರಾಕೃತಿವಾಗಿ ಮತ್ತು ಭೌಗೋಳಿಕವಾಗಿ ಸಂಪದ್ಭರಿತವಾಗಿರುವ ಬೆಂಗಳೂರು ದಣ ಜಿಲ್ಲೆ(ರಾಮನಗರ)ಯನ್ನು ಟೂರಿಸ್ಂ ಹಬ್​ ಆಗಿ ಪರಿವರ್ತನೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಲವಾಗಿದೆ.

ಬೃಹತ್​ ಬೆಟ್ಟಗಳು, ದಟ್ಟಕಾಡುಗಳು, ಹಲವಾರು ಜಲಾಶಯಗಳನ್ನು ಒಳಗೊಂಡಿರುವ ರಾಮನಗರ ಜಿಲ್ಲೆ ಅಷ್ಟ ದಿಕ್ಕುಗಳಿಂದಲೂ ವಿವಿಧ, ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಜಿಲ್ಲೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿದ್ದರೂ ಸಮರ್ಪಕವಾಗಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ರ್ನಿದಿಷ್ಟ ಯೋಜನೆ ಜಾರಿಗೆ ತರಲು ಸರ್ಕಾರಗಳು ಎಡವಿವೆ.

ಸ್ಪಷ್ಟ ಮಾರ್ಗ ಸೂಚಿಯೇ ಇಲ್ಲ

ಪ್ರತಿ 5 ವರ್ಷಗಳಿಗೊಮ್ಮೆ ಸರ್ಕಾರ ಪ್ರವಾಸೋದ್ಯಮ ನೀತಿ ಜಾರಿಗೆ ತಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ. ಆದರೆ, ಒಂದು ವರ್ಷದ ಹಿಂದೆ ಹೊಸ ಪ್ರವಾಸೋದ್ಯಮ ನೀತಿಯನ್ನು ಬಿಡುಗಡೆ ಮಾಡಿದ ಸರ್ಕಾರ, ಇದರ ಮಾರ್ಗಸೂಚಿ ಬಿಡುಗಡೆ ಮಾಡಿ ಅನುಷ್ಠಾನಗೊಳಿಸುವಲ್ಲಿ ಹಿಂದೆ ಬಿದ್ದಿದೆ. ಕೃಷಿ ಪ್ರವಾಸೋದ್ಯಮ ಕ್ಷೇತ್ರವನ್ನು ಒಳಗೊಂಡ ಹೊಸ ನೀತಿಗೆ ಬೇಕಾದ ಮಾರ್ಗಸೂಚಿ ಇಲ್ಲದ ಕಾರಣ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಆಸಕ್ತರು ಮಾಹಿತಿ ಕೇಳಿದರೆ, ಮಾರ್ಗಸೂಚಿ ಬಂದಿಲ್ಲ ಎನ್ನುವ ಸಿದ್ಧ ಉತ್ತರ, ರಾಮನಗರದಿಂದ ಬೆಂಗಳೂರಿನವರೆಗೂ ಬರುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದ ಹಿನ್ನಡೆಯ ಪ್ರಮುಖ ಕಾರಣಗಳಲ್ಲಿ ಒಂದು.

ಹೊಂದಾಣಿಕೆ ಕೊರತೆ

ರಾಮನಗರ ಜಿಲ್ಲೆಯ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನ, ಕಾವೇರಿ ವನ್ಯ ಜೀವಿಧಾಮ, ರಣಹದ್ದು ಧಾಮದಂತಹ ಪ್ರಮುಖ ಅರಣ್ಯ ಕ್ಷೇತ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಪರಿಸರದ ಸೂಕ್ಷ್ಮ ಪ್ರದೇಶ ಉಳಿವು ಅಗತ್ಯವಾದರೂ, ಇಲಾಖೆಯ ಅನಗತ್ಯ ರ್ನಿಬಂಧ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಅಲ್ಲದೆ, ಕೆಲ ಕಡೆಗಳಲ್ಲಿ ಪರಿಸರ ಸೂಕ್ಷ್ಮ ವಲಯದ ಗಡಿ ಗುರುತಿಸುವಿಕೆಯಲ್ಲಿ ಪ್ರಭಾವಿಗಳ ಕೈಚಳ ಇರುವ ಕಾರಣ ಹೋಂ ಸ್ಟೇ ರೆಸಾರ್ಟ್​ಗಳ ನಿರ್ಮಾಣಕ್ಕೆ ದೊಡ್ಡ ತೊಡಕಾಗಿದೆ. ವನ್ಯ ಜೀವಿ ಧಾಮಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ವ್ಯಾಪ್ತಿಗೊಳಪಡುವ ಕೆಲ ಪ್ರಮುಖ ಪ್ರವಾಸಿ ತಾಣಗಳು ಅರಣ್ಯ ಇಲಾಖೆ ಅನಗತ್ಯ ಬಿಗಿ ನಿಲುವಿನ ಪರಿಣಾಮ ಬಂದ್​ ಆಗಿವೆ. ಇದೂ ಸಹ ಪ್ರವಾಸೋದ್ಯಮಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ನಡುವಿನ ಸಮನ್ವಯದ ಕೊರತೆ.

ಮಾತಲ್ಲೇ ಉಳಿದಿವೆ

ಜಿಲ್ಲೆಯನ್ನು ಟೂರಿಸ್​ಂ ಹಬ್​ ಮಾಡುವ, ಪ್ರವಾಸಿ ಸರ್ಕೀಟ್​ ನಿರ್ಮಾಣ, ಕೃಷಿ, ರೇಷ್ಮೆ, ಬೊಂಬೆಗಳನ್ನು ಮುಂದಿಟ್ಟುಕೊಂಡು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮಾತುಗಳನ್ನು ಹಿಂದಿನಿಂದಲೂ ಅಧಿಕಾರಿ, ಜನಪ್ರತಿನಿಧಿಗಳು ಆಡುತ್ತಲೇ ಬಂದಿದ್ದಾರೆ. ಆದರೆ ಇವು ಯಾವುವೂ ಕಾರ್ಯರೂಪಕ್ಕೆ ಬಂದೇ ಇಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರನ್ನು ಒಳಗೊಂಡ ಟೂರಿಸ್​ಂ ಸರ್ಕೀಟ್​ ನಿರ್ಮಾಣ, ಟೂರಿಸ್​ಂ ಹಬ್​ ನಿರ್ಮಾಣದ ಬಗ್ಗೆ ಚರ್ಚೆಗಳು ನಡೆದವು. ಸಿಲ್ಕ್​ ಟೂರಿಸ್​ಂ ಜಾರಿಗೊಂಡು ಒಂದು ತಂಡ ಬಂದು ಹೋಗಿದ್ದು ಬಿಟ್ಟರೆ ಮುಂದೇನಾಯ್ತು ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲ.

ಬಂಡೆಗಳನ್ನು ಬಳಕೆ ಮಾಡಿ

ಬಂಡೆಗಳು ಎಂದರೆ ಜಿಲ್ಲೆಯಲ್ಲಿ ಗಣಿಗಾರಿಕೆ ವಿಷಯ ಚರ್ಚೆಗೆ ಬರುತ್ತವೆ. ಆದರೆ ಪ್ರಾಕೃತಿವಾಗಿ ಜಿಲ್ಲೆಯ ಸೊಬಗನ್ನು ಹೆಚ್ಚಿಸಿರುವ ಬಂಡೆಗಳನ್ನು ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಜಿಫ್ ಲೈನ್​ಗಳು, ರಾಕ್​ ಕ್ಲೆಂಬಿಂಗ್​, ಸಾಹಸ ಕ್ರೀಡೆಗಳನ್ನು ಜಾರಿಗೆ ತರುವ ಮೂಲಕ ಪ್ರವಾಸೋದ್ಯಮದ ಬೆಳವಣಿಗೆ ಜತೆಗೆ ಸ್ಥಳಿಯವಾಗಿ ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಡಬಹು.

ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್ಕಾರದ ಮಾರ್ಗಸೂಚಿಯೂ ಬಹಳ ಮುಖ್ಯ. ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಘೋಷಣೆ ಮಾಡಿದೆ, ಆದರೆ ಮಾರ್ಗಸೂಚಿ ಬಿಡುಗಡೆ ಆಗಿಲ್ಲ. ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ.> ಕೆ.ಅರುಣೇಶ್​ ಗೌಡಕಾರ್ಯದರ್ಶಿ ಜಿಲ್ಲಾ ಟೂರಿಸ್​ಂ ಸೊಸೈಟಿಹೊಸ ಪ್ರವಾಸೋದ್ಯಮ ನೀತಿ ಘೋಷಣೆ ಆಗಿದೆ. ಮಾರ್ಗಸೂಚಿ ಇನ್ನೂ ಬಂದಿಲ್ಲ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ರಾಕ್​ ಕ್ಲೆಬಿಂಗ್​ನಂತ ಚಟುವಟಿಕೆಗಳಿಗೆ ಶ್ರೀವೇ ಚಾಲನೆ ನೀಡಲಾಗುವುದು.ರವಿಕುಮಾರ್​,ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆಬೆಂಗಳೂರು ದಣ, ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net