ನ.13ರಂದು ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ

Published on

ಮೂಲ್ಕಿ: ಭಾರತದ ಕಾನೂನು ನೆರವು ಘಟಕ ಹಳೆಯಂಗಡಿ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ, ಮೂಲ್ಕಿ ವಿಜಯ ಕಾಲೇಜು ಆಶ್ರಯದಲ್ಲಿ ದ.ಕ. ಜಿಲ್ಲೆಯ ಡಿಗ್ರಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ನ.13ರಂದು ಬೆಳಗ್ಗೆ 10ಕ್ಕೆ ವಿಜಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾಷಣ ಸ್ಪರ್ಧೆ ವಿಷಯ: ಅಮ್ಮೆಂಬಳ ಸುಬ್ಬರಾವ್ ಮತ್ತು ಕೆನರಾ ಬ್ಯಾಂಕ್ ಸ್ಥಾಪಕರ ದಿನದ ಮಹತ್ವ. ಸ್ಪರ್ಧೆಯ ನಿಯಮಗಳು: ಸ್ಪರ್ಧೆಗೆ 5 ನಿಮಿಷ ಅವಕಾಶ, ಕನ್ನಡ ಭಾಷೆಗೆ ಆದ್ಯತೆ, ದ.ಕ. ಜಿಲ್ಲೆಯ ಯಾವುದೇ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಅವಕಾಶ.

ಆಸಕ್ತರು ತಮ್ಮ ಹೆಸರನ್ನು ನ.8ರ ಒಳಗಾಗಿ ಡೇನಿಯಲ್ ದೇವರಾಜ್, ಅಧ್ಯಕ್ಷರು, ಕಾನೂನು ನೆರವು ಘಟಕ ಹಳೆಯಂಗಡಿ, ದೂ.ಸಂ.: 9448253082, ಇಮೇಲ್: danieldevarajmulki@gmail.com ಅಥವಾ ಮುಖ್ಯಸ್ಥರು, ಕನ್ನಡ ವಿಭಾಗ, ವಿಜಯ ಕಾಲೇಜು ಮೂಲ್ಕಿ, ದೂ.ಸಂ.: 9481916150, ಇಮೇಲ್: shailaja.ethalka@gmail.com ಮೂಲಕ ನೋಂದಾಯಿಸಬಹುದು. ನ.19ರಂದು ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ವಕೀಲ ಡೇನಿಯಲ್ ದೇವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net