ಥ್ರೋಬಾಲ್‌ನಲ್ಲಿ ಆಲೂರು ಶಾಲೆ ಜಿಲ್ಲಾಮಟ್ಟಕ್ಕೆ

District
ತ್ರೋಬಾಲ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಆಲೂರು ಸರ್ಕಾರಿ ಪ್ರೌಢಶಾಲೆಯ ಬಾಲಕ-ಬಾಲಕಿಯರ ತಂಡ
Published on

ಗಂಗೊಳ್ಳಿ: ಬೈಂದೂರು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಥ್ರೋಬಾಲ್ ಪಂದ್ಯಾಟದಲ್ಲಿ ಆಲೂರಿನ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಸತತ ಏಳನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡವೂ ಪ್ರಥಮ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಮುಖ್ಯಶಿಕ್ಷಕ ನಾರಾಯಣ ಶೆಟ್ಟಿ, ತಂಡದ ವ್ಯವಸ್ಥಾಪಕ ಗಣೇಶ್, ಮಹಿಳಾ ತಂಡದ ವ್ಯವಸ್ಥಾಪಕಿ ಅಮೃತಾ, ತರಬೇತಿದಾರ ಪ್ರವೀಣ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಉದಯ್, ಸುರೇಂದ್ರ, ಶಶಿಧರ್, ವೀಣಾ ತಂಡಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net