ಜಿಲ್ಲಾ ಮಟ್ಟದ ಸಮಗ್ರ ಚಾಂಪಿಯನ್ ಪಡೆದ ಬಸವೇಶ್ವರ ಪಿಯು ಕಾಲೇಜು

13-byd sports
Published on

ಲಿಂಗಸುಗೂರು: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇತ್ತಿಚಿಗೆ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾನಾ ಕ್ರೀಡೆಗಳಲ್ಲಿ ವಿಜೇತರಾಗಿ ಸಮಗ್ರ ಚಾಂಪಿಯನ್ ಪಡೆದಿದ್ದಾರೆ.

ಬಾಲಕರ ಥ್ರೋಬಾಲ್(ಪ್ರ), ಬಾಲಕಿಯರ ಖೋಖೋ (ಪ್ರ), ಬಾಲಕರ ವೈಯಕ್ತಿಕ ಅಥ್ಲೆಟಿಕ್ಸ್‌ನಲ್ಲಿ ಅಮರೇಶ ತಂದೆ ಹನುಮಂತ 400 ಮೀ. ಓಟದಲ್ಲಿ (ದ್ವಿ), ಹನುಮಂತ ತಂದೆ ರಾಮಣ್ಣ 800 ಮೀ. ಓಟದಲ್ಲಿ (ಪ್ರ) ಹಾಗೂ 1500 ಮೀ. ಓಟದಲ್ಲಿ (ದ್ವಿ),

ಶಿವಕುಮಾರ ತಂದೆ ರೇವಪ್ಪ 5000 ಮೀ. ಓಟ ಮತ್ತು 5000 ಮೀ. ಗುಡ್ಡಗಾಡು ಓಟದಲ್ಲಿ (ದ್ವಿ), ಮಂಜುನಾಥ ತಂದೆ ದುರುಗಪ್ಪ ಗುಂಡು ಮತ್ತು ಜಾವೆಲಿನ್ ಎಸೆತದಲ್ಲಿ (ಪ್ರ), ಸೋಮಶೇಖರ್ ತಂದೆ ಹುಲಗಪ್ಪ 5000 ಮೀ. ಗುಡ್ಡಗಾಡು ಓಟದಲ್ಲಿ (ತೃ) ಸ್ಥಾನ ಪಡೆದಿರುತ್ತಾರೆ.

ಬಾಲಕಿಯರ ಅಥ್ಲೆಟಿಕ್ಸ್ ವೈಯಕ್ತಿಕ ಆಟದಲ್ಲಿ ಬಸಮ್ಮ ತಂದೆ ಸಂಗಣ್ಣ 800 ಮೀ. ಓಟದಲ್ಲಿ (ಪ್ರ), ಸೀತಾಬಾಯಿ ತಂದೆ ವೆಂಕಟೇಶ 3000 ಮೀ. ಓಟದಲ್ಲಿ (ಪ್ರ), ಪೂಜಾ ತಂದೆ ಹುಲ್ಲಪ್ಪ 5000 ಮೀ. ಓಟದಲ್ಲಿ (ಪ್ರ), ಮುಕ್ತಾ ತಂದೆ ಚನ್ನಬಸಪ್ಪ ಹ್ಯಾಮರ್ ಥ್ರೋ (ಪ್ರ)ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net