ಬಳ್ಳಾರಿ ಹುಡ್ಗೀರು, ಕಲಬುರಗಿ ಹುಡುಗ್ರು ಚಾಂಪಿಯನ್

sports day
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿಭಾಗ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯ ಅಂಡರ್-೧೪, ೧೭ ಬಾಲಕ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಕಲಬುರಗಿ ಮತ್ತು ಬಳ್ಳಾರಿ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡಿವೆ.
ಚAದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಜರುಗಿದ ವಿಭಾಗ ಮಟ್ಟದ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಬಳ್ಳಾರಿ-ಕಲಬುರಗಿ ತಂಡಗಳು ಭಾರಿ ಪೈಪೋಟಿ ಮೂಲಕ ಉತ್ತಮ ಪ್ರದರ್ಶನ ತೋರಿದವು. ಬೆಳಗ್ಗೆ ೧೧ಕ್ಕೆ ಶುರುವಾದ ನಾಕೌಟ್ ಪಂದ್ಯಗಳಲ್ಲಿ ಎಡವಿದ ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ ತಂಡಗಳು ಟೂರ್ನಿಯಿಂದ ಹೊರಬಿದ್ದರೆ, ಕಲಬುರಗಿ ಹಾಗೂ ಬಳ್ಳಾರಿ ಟೀಮ್‌ಗಳು ಫೈನಲ್‌ಗೆ ಎಂಟ್ರಿ ಕೊಟ್ಟವು.
ಮೊದಲು ಅಂಡರ್-೧೪ ಬಾಲಕಿಯರ ಪಂದ್ಯದಲ್ಲಿ ಬಳ್ಳಾರಿ-ಕಲಬುರಗಿ ಮಧ್ಯೆ ಭಾರಿ ಪೈಪೋಟಿ ನಡೆಯಿತು. ೧೦-೦೪ ಬಾಸ್ಕೆಟ್ ಅಂತರದಿAದ ಬಳ್ಳಾರಿ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಅಂಡರ್-೧೭ ಬಾಲಕಿಯರ ವಿಭಾಗದಲ್ಲೂ ಬಳ್ಳಾರಿ ಪಾರುಪತ್ಯ ಮೆರೆಯಿತು. ೨೮-೩ ಬಾಸ್ಕೆಟ್‌ಗಳ ಭಾರಿ ಅಂತರದೊAದಿಗೆ ಗಣಿ ನಾಡಿನ ಹುಡುಗಿಯರು ಮೇಲುಗೈ ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net