ಥ್ರೋಬಾಲ್‌ನಲ್ಲಿ ಮಂಗಳೂರು ನಗರ, ಪುತ್ತೂರು ಚಾಂಪಿಯನ್ಸ್ : ಕುಕ್ಕೆಯಲ್ಲಿ ನಡೆದ ಪ.ಪೂ ವಿಭಾಗದ ಪಂದ್ಯಾಟ : ಬೆಳ್ತಂಗಡಿಗೆ ದ್ವಿತೀಯ ಸ್ಥಾನ

Published on

ಸುಬ್ರಹ್ಮಣ್ಯ: ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಆಶ್ರಯದಲ್ಲಿ ಮಂಗಳವಾರ ಎಸ್‌ಎಸ್ ಪಿಯು ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಮಂಗಳೂರು ನಗರ ಮತ್ತು ಪುತ್ತೂರು ತಾಲೂಕು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಬಾಲಕರ ವಿಭಾಗದಲ್ಲಿ ಮಂಗಳೂರು ನಗರ ತಾಲೂಕನ್ನು ಪ್ರತಿನಿಧಿಸುವ ಸೇಂಟ್ ಅಲೋಷಿಯಸ್ ಕಾಲೇಜು ಮತ್ತು ಬೆಳ್ತಂಗಡಿಯನ್ನು ಪ್ರತಿನಿಧಿಸುವ ವಾಣಿ ಪದವಿಪೂರ್ವ ಕಾಲೇಜುಗಳ ನಡುವೆ ಪಂದ್ಯಾಟ ನಡೆದು ಅಲೋಷಿಯಸ್ ಪ್ರಥಮ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಅಂಬಿಕಾ ಪ.ಪೂ ತಂಡ ಚಾಂಪಿಯನ್ ಪುರಸ್ಕಾರ ಸ್ವೀಕರಿಸಿತು. ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಧನಂಜಯ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಸದಸ್ಯೆ ಭಾರತಿ ದಿನೇಶ್ ಮೊದಲಾದವರಿದ್ದರು.
ಬಾಲಕಿಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಅಂಬಿಕಾ ಪ.ಪೂ ತಂಡ ಚಾಂಪಿಯನ್ ಪುರಸ್ಕಾರ ಸ್ವೀಕರಿಸಿತು. ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಧನಂಜಯ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಸದಸ್ಯೆ ಭಾರತಿ ದಿನೇಶ್ ಮೊದಲಾದವರಿದ್ದರು.

ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರತಿನಿಧಿಸುವ ಅಂಬಿಕಾ ಪದವಿಪೂರ್ವ ಕಾಲೇಜು ಮತ್ತು ಬೆಳ್ತಂಗಡಿಯನ್ನು ಪ್ರತಿನಿಧಿಸುವ ವಾಣಿ ಪದವಿಪೂರ್ವ ಕಾಲೇಜುಗಳ ನಡುವೆ ಪಂದ್ಯಾಟ ನಡೆದು, ಅಂಬಿಕಾ ತಂಡ ಪ್ರಥಮ ಸ್ಥಾನ ಪಡೆಯಿತು.

ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಧನಂಜಯ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಸದಸ್ಯೆ ಭಾರತಿ ದಿನೇಶ್, ಪ್ರಾಚಾರ್ಯ ಸೋಮಶೇಖರ ನಾಯಕ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ತ್ರಿವೇಣಿ ದಾಮ್ಲೆ, ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಉಪನ್ಯಾಸಕ ಜಯಪ್ರಕಾಶ್ ರವೀಂದ್ರನ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಕ್ರೀಡಾ ಸಂಯೋಜಕಿ ಜ್ಯೋತಿ ಪಿ.ರೈ, ಕ್ರೀಡಾ ಕಾರ್ಯದರ್ಶಿ ಹಿತೇಶ್ ಎಚ್.ಎಸ್, ವಿದ್ಯಾರ್ಥಿ ನಾಯಕ ಗಗನ್ ಡಿ.ಕೆ, ಸಿಬ್ಬಂದಿ ಮಹೇಶ್ ಕೆ.ಎಚ್ ಬಹುಮಾನ ವಿತರಿಸಿದರು. ಉಪನ್ಯಾಸಕ ರತ್ನಾಕರ ಎಸ್. ಸ್ವಾಗತಿಸಿದರು. ಉಪನ್ಯಾಸಕಿ ಶ್ರುತಿ ಯಾಲದಾಳು ನಿರೂಪಿಸಿದರು.

ಬೆಸ್ಟ್ ರಿಸೀವರ್, ಅಟ್ಯಾಕರ್

ಬಾಲಕರ ವಿಭಾಗದಲ್ಲಿ ಸೈಂಟ್ ಅಲೋಷಿಯಸ್ ಕಾಲೇಜಿನ ರಜೀನ್ ಬೆಸ್ಟ್ ರಿಸೀವರ್, ವಾಣಿ ಕಾಲೇಜಿನ ಜಾನ್‌ಪ್ರಕಾಶ್ ಬೆಸ್ಟ್ ಅಟ್ಯಾಕರ್, ಅಲೋಷಿಯಸ್‌ನ ಅಫೀಲ್ ಬೆಸ್ಟ್ ಆಲ್‌ರೌಂಡರ್ ವೈಯಕ್ತಿಕ ಪುರಸ್ಕಾರ ಪಡೆದರು. ಬಾಲಕಿಯರ ವಿಭಾಗದಲ್ಲಿ ಪುತ್ತೂರಿನ ಅಂಬಿಕಾದ ರಿಯಾ ಬೆಸ್ಟ್ ರಿಸೀವರ್, ವಾಣಿ ಕಾಲೇಜಿನ ಸಾಹಿತ್ಯ ಬೆಸ್ಟ್ ಅಟ್ಯಾಕರ್, ಅಂಬಿಕಾದ ಅವನಿ ಬೆಸ್ಟ್ ಆಲ್‌ರೌಂಡರ್ ವೈಯಕ್ತಿಕ ಪುರಸ್ಕಾರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net