ನಾಳ ಕ್ಷೇತ್ರದಲ್ಲಿ ಹೊಸ ಅಕ್ಕಿ ಊಟ : ಭಕ್ತರಿಗೆ ಕದಿರು ವಿತರಣೆ

naala
Published on

ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕದಿರು ವಿತರಣೆ, ಹೊಸ ಅಕ್ಕಿ ಊಟ ಮತ್ತು ಕನ್ಯಾ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ನೇತೃತ್ವದಲ್ಲಿ ನಡೆಯಿತು.

ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಸಂತ ಮಜಲು, ಹಿರಿಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ಅಂಬಾ ಬಿ. ಆಳ್ವ, ರಾಜೇಶ್ ಶೆಟ್ಟಿ ಎ., ದಿನೇಶ್ ಗೌಡ ಕೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಎಸ್., ಸ್ಥಳೀಯರಾದ ಉಮಾನಾಥ ಶೆಟ್ಟಿ., ಆಶೋಕ ಆಚಾರ್ಯ ಜಿ., ಪತ್ರಕರ್ತ ಶ್ರವಣ್ ಕುಮಾರ್ ಬಳ್ಳಿ, ಭಜನಾ ಮಂಡಳಿ ಸದಸ್ಯರು, ವಿವಿಧ ಸಮಿತಿಯ ಪದಾಧಿಕಾರಿಗಳು,ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತಾಧಿಗಳು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net