ಬಂಗಾಡಿ ಸೊಸೈಟಿಗೆ ಜಿಲ್ಲಾಮಟ್ಟದ ಪ್ರಶಸ್ತಿ

award
ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ಪ್ರಶಸ್ತಿ ಸ್ವೀಕರಿಸಿದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ 2023-24ನೇ ಸಾಲಿನ ಅತ್ಯುತ್ತಮ ಕಾರ್ಯವೈಖರಿ ಹಾಗೂ ಸರ್ವಾಂಗೀಣ ಅಭಿವೃದ್ಧಿ ಗುರುತಿಸಿ ಮಂಗಳೂರಿನ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡುವ ಜಿಲ್ಲಾಮಟ್ಟದ ದ್ವಿತೀಯ ಪ್ರಶಸ್ತಿ ನೀಡಲಾಯಿತು.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 7ಶಾಖೆಗಳನ್ನು ಹೊಂದಿದ್ದು 2023-24ನೇ ಸಾಲಿನಲ್ಲಿ 1020.89 ಕೋಟಿ ರೂ.ವ್ಯವಹಾರ ನಡೆಸಿ, 127.11 ಕೋಟಿ ರೂ. ಠೇವಣಿ ಹಾಗೂ 175.02 ಕೋಟಿ ರೂ. ಹೊರಬಾಕಿ ಸಾಲವನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ 4.30 ಕೋಟಿ ರೂ. ಲಾಭ ಗಳಿಸಿದೆ. ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

ಬಂಗಾಡಿ ಸಿಎ ಬ್ಯಾಂಕಿನ ಉಪಾಧ್ಯಕ್ಷ ವಸಂತಗೌಡ ನಿರ್ದೇಶಕರಾದ ವಿನಯ ಚಂದ್ರ ಗೌಡ, ರಮೇಶ್ ಕೆಂಗಾಜೆ, ವಿಜಯಾ, ವೃತ್ತಿಪರ ನಿರ್ದೇಶಕಿ ಪುಷ್ಪಲತಾ ಕೆ.ಸಿಬ್ಬಂದಿ ಚಂದ್ರಕಾಂತ, ಬಾಲಕೃಷ್ಣ ಸುವರ್ಣ ಹಾಗೂ ರಮಾನಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net