ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜತೆ ಸೆಲ್ಫಿಗೆ ಮುಗಿಬಿದ್ದ ಪುಟಾಣಿಗಳು

IMG-20240815-WA0276(1)
Published on

ಮಂಗಳೂರು: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಿ ಸಭಾಂಗಣದಿಂದ ಹೊರ ಬರುತ್ತಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಹಸ್ತಲಾಘವ ನೀಡಲು ಹಾಗೂ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಪುಟಾಣಿಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮುಗಿಬಿದ್ದರು.
ಸಾಭಾಂಗಣದಿಂದ ಹೊರಬರುತ್ತಿದ್ದ ಜಿಲ್ಲಾಧಿಕಾರಿಯವರನ್ನು ಯಾರೋ ಮಕ್ಕಳು ಗುರುತಿಸಿದರು. ಜಿಲ್ಲಾಧಿಕಾರಿಯವರ ನಗುಮೊಗ ಕಂಡ ಪುಟಾಣಿಗಳೂ ಅನೇಕ ಮಂದಿ ದೈರ್ಯ ತೆಗೆದುಕೊಂಡು ಒಬ್ಬೊಬ್ಬರೇ ಹಸ್ತ ಲಾಘವ ನೀಡಿದರು. ಜಿಲ್ಲಾಧಿಕಾರಿಯವರು ಕೆಲ ಕಾಲ ಮಕ್ಕಳ ಸಂಭ್ರಮದಲ್ಲಿ ಭಾಗಿಯಾದರು.
ಮಳೆಗಾಲದ ರಜೆಯ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅಂಗನವಾಡಿ ಮಕ್ಕಳಿಗೂ ಜಿಲ್ಲಾಧಿಕಾರಿ ಪರಿಚಿತರಾಗಿದ್ದಾರೆ. ಅಧಿಕ ಮಳೆ ಇರುವ ಸಂದರ್ಭದಲ್ಲಿ ಎಳೆಯ ಮಕ್ಕಳು ಕೂಡ ಬೆಳಗ್ಗೆ- ರಾತ್ರಿ ತನ್ನ ಹುದ್ದೆಯ ಅಧಿಕೃತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ರಜೆ ಕೇಳುತ್ತಿರುವ ಬಗ್ಗೆ ಮುಲ್ಲೈ ಮುಗಿಲನ್ ಅವರು ಇತ್ತೇಚೆಗೆ ಸಮಾರಂಭವೊಂದರಲ್ಲಿ ಅನುಭವ ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net