

ಗೋಣಿಕೊಪ್ಪ: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಯ ನೂತನ ಟರ್ಫ್ ಮೈದಾನದಲ್ಲಿ ಶನಿವಾರ 5ಎಸೈಡ್ ಹಾಕಿ ಟೂರ್ನಮೆಂಟಿಗೆ ಚಾಲನೆ ದೊರಕಿತು.
ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಕಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ 16 ಕಾಲೇಜಿನ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಮಾಜಿ ಲಯನ್ಸ್ ಗವರ್ನರ್ ಚೆಪ್ಪುಡೀರ ಸುಭಾಶ್ ಮುತ್ತಣ್ಣ ಉದ್ಘಾಟಿಸಿದರು.
ಲಯನ್ಸ್ ಕಾಲೇಜಿನ ಪ್ರಾಂಶುಪಾಲ ಲತಾ ಬೋಪಣ್ಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಲಯನ್ಸ್ ನಿರ್ದೇಶಕ ಡಾ.ಸೂರಜ್‌ಉತ್ತಪ್ಪ ಮಾತನಾಡಿ, ಕಳೆದ ವರ್ಷಕ್ಕೆ ಲಯನ್ಸ್ ಕ್ಲಬ್‌ಗೆ 50 ವರ್ಷ ತುಂಬಿದ ಸವಿನೆನಪಿನಲ್ಲಿ ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡುವ ಸಲುವಾಗಿ ಲಯನ್ಸ್ ಕ್ಲಬ್ ವತಿಯಿಂದ ನೂತನ ಟರ್ಫ್ ಮೈದಾನವನ್ನು ಲಯನ್ಸ್ ಶಾಲೆಯಲ್ಲಿ ಆರಂಭಿಸಲಾಯಿತು. ಆ ಮೂಲಕ ಜಿಲ್ಲೆಯ ಹಾಕಿ ಕ್ರೀಡಾಪಟುಗಳಿಗೆ ಮತ್ತಷ್ಟು ಸಹಕಾರಿಯಾಗಲು ಜಿಲ್ಲಾಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆ ಎಂದು ವಿವರಿಸಿದರು.
ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಿಮಾಡ ಅಪ್ಪಣ್ಣ ಮಾತನಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಖಜಾಂಚಿ ಮಂಡೇಪಂಡ ಸಚ್ಚಿನ್, ಡಾ.ಅಮ್ಮಂಡ ಚಿಣ್ಣಪ್ಪ, ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಲಯನ್ಸ್ ಕ್ಲಬ್ ಸದಸ್ಯ ಮನ್ನಕ್ಕಮನೆ ಬಾಲಕೃಷ್ಣ, ಸೋಮಯ್ಯ, ಮಿಲನ್ ಗಣಪತಿ, ಕೆ.ಟಿ.ಗಣಪತಿ, ಸಿ.ಟಿ.ಅಪ್ಪಣ್ಣ, ಸುಧಾ ಪ್ರಸಾದ್, ಕಿರಣ್ ಚಂಗಪ್ಪ, ಸಿ.ಪಿ.ಮುತ್ತಣ್ಣ, ಕೆ.ಪಿ.ಅಚ್ಚಯ್ಯ, ಗುಮ್ಮಟ್ಟಿರ ಮುತ್ತಣ್ಣ, ಅಲ್ಲುಮಾಡ ಸುನೀಲ್, ಶ್ರೀಮಂತ್ ಮುತ್ತಣ್ಣ, ಶ್ಮರಣ್ ಸುಭಾಶ್, ಪ್ರಣಿತಾ ಪೂಣಚ್ಚ, ಸಿ.ಪಿ.ಬೋಪಣ್ಣ, ನಿತಿ ಪೂಣಚ್ಚ, ಕೆ.ಎಸ್. ಸೋಮಣ್ಣ, ಪಿ.ಜಿ.ಅರುಣ್, ಪಿ.ಎನ್.ಪೆಮ್ಮಯ್ಯ ಇದ್ದರು.
ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.