ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು

1mnv01
ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕೆ ಶಾಸಕ ಹಂಪಯ್ಯನಾಯಕ ವಿದ್ಯಾರ್ಥಿಗಳಿಗೆ, ಆಂಗ್ಲ ಶಿಕ್ಷಕ ರಂಜೀತ್‌ಕುಮಾರ್‌ಗೆ ಸನ್ಮಾನಿಸಿ ಗೌರವಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ದೇವಯ್ಯ ಹಿರೇಮಠ, ಶಿಕ್ಷಕಿ ಗಂಗಮ್ಮ ಇದ್ದರು.
Published on

ಮಾನ್ವಿ: ತಾಲೂಕಿನ ನಿರಮಾನ್ವಿಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

‘ಸೇಫ್ ಯುಸ್ ಆಫ್ ಇಂಟರ್ನೆಟ್’ ವಿಷಯದ ಮೇಲೆ ವಿದ್ಯಾರ್ಥಿನಿಯರಾದ ಐಶ್ವರ್ಯ, ರಂಜಿತಾ, ಉಮ್ಮೆ ರೂಮಾನ್, ಮೇಘನಾ, ಆಸ್ಮಾ, ಆಂಗ್ಲ ಭಾಷೆಯಲ್ಲಿ ಪಾತ್ರಾಭಿನಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಂಗ್ಲಭಾಷೆಯ ಶಿಕ್ಷಕ ರಂಜಿತ್‌ಕುಮಾರ್ ಮಾರ್ಗದರ್ಶನ ನೀಡಿದ್ದರು.

ಶಾಸಕ ಹಂಪಯ್ಯನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಶಾಲೆಯ ಮುಖ್ಯೋಪಾಧ್ಯಾಯ ದೇವಯ್ಯ ಹಿರೇಮಠ ಇದ್ದಾರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net