ಬ್ಯಾಂಕಿಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

Published on

ಚಿಕ್ಕಬಳ್ಳಾಪುರ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನಿಯಮ ಉಲ್ಲಂಘಿಸಿದ ರಾಷ್ಟ್ರೀಕೃತ ಬ್ಯಾಂಕಿಗೆ ದಂಡ ವಿಧಿಸಿದೆ.

ನಗರದ ಲ್ಮನಾರಾಯಣ ಪೈಂಟ್ಸ್​ ಆ್ಯಂಡ್​ ಹಾರ್ಡ್​ವೇರ್​ ಅಂಗಡಿ ಮಾಲೀಕ ಎನ್​.ಎ.ರಾಮರೆಡ್ಡಿ ಸಾಲ ಪಾವತಿಸಿದರೂ ಮೂಲ ದಾಖಲೆ ಒದಗಿಸದಿರುವ ಬ್ಯಾಂಕಿನ ಧೋರಣೆ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಮೊದಲು ಬ್ಯಾಂಕಿನಲ್ಲಿ ಆಸ್ತಿಯ ಮೂಲ ದಾಖಲೆ ಇಟ್ಟು ಸಾಲ ಪಡೆದಿದ್ದು ಬಳಿಕ ಸೂಕ್ತ ಅವಧಿಯಲ್ಲಿ ಅಸಲು ಮತ್ತು ಬಾಕಿ ಹಣ ಪಾವತಿಸಲಾಗಿದೆ. ಆದರೂ ಸಂಬಂಧಪಟ್ಟ ದಾಖಲೆಗಳನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್​.ಕುಮಾರ್​ ಮತ್ತು ಸದಸ್ಯರಾದ ಎಚ್​.ಜನಾರ್ದನ್​ ಪರಿಶೀಲಿಸಿದ್ದು, ಸೇವಾ ನ್ಯೂನತೆ ದೃಢಪಟ್ಟ ಹಿನ್ನೆಲೆಯಲ್ಲಿ 45 ದಿನಗಳೊಳಗೆ ದೂರುದಾರರಿಗೆ 2,04,000 ರೂ.ಮತ್ತು ದಾವೆ ವೆಚ್ಚ 8,000 ರೂ. ನೀಡಬೇಕೆಂದು ಆಯೋಗವು ಬ್ಯಾಂಕಿಗೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net