ಕಾಫರ್ಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಕಾಫರ್ಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
Published on

ಸಕಲೇಶಪುರ: ಸೇರದಿದ್ದರು ತಿನ್ನಿ, ಸಾಧ್ಯವಾದಷ್ಟು ಬಿಸಿ ನೀರು ಕುಡಿಯಿರಿ, ಸೊಳ್ಳೆಗಳಿಂದ ಸಾಧ್ಯವಾದಷ್ಟು ರಕ್ಷಣೆ ಪಡೆಯಿರಿ ಇದು ಜಿಲ್ಲಾಧಿಕಾರಿ ಸತ್ಯಭಾಮ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಒಳರೋಗಿಗಳಿಗೆ ನೀಡಿದ ಸಲಹೆಗಳಿವು.

ಸಿಡಿಲು ಬಡಿದು ಗಾಯಗೊಂಡು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೇಲೂರು ತಾಲೂಕಿನ ಕೋರ್ಲಗದ್ದೆ ಗ್ರಾಮದ ಮಹಿಳೆಯರಿಗೆ ಸೋಮವಾರ ಧೈರ್ಯ ಹೇಳಿದ ನಂತರ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿ ಕೆಲವು ಸಲಹೆಗಳನ್ನು ನೀಡಿದರು.

ಸಿಡಿಲು ಬಡಿದು ಗಂಭೀರ ಗಾಯಗೊಂಡಿರುವವರ ಕುರಿತು ಮಾತನಾಡಿ, ನಿಮ್ಮ ಸಹಾಯಕ್ಕೆ ಜಿಲ್ಲಾಡಳಿತವಿರುತ್ತದೆ ಯಾರೂ ಎದೆ ಗುಂದುವುದು ಬೇಡ ಎಂದು ಹೇಳಿದರು. ಗಾಯಾಳುಗಳಿಗೆ ಪ್ರಾಕೃತಿಕ ವಿಪತ್ತು ನಿಧಿಯಿಂದ ಪರಿಹಾರ ಒದಗಿಸಲು ಕ್ರಮವಹಿಸುವುದಾಗಿ ಹೇಳಿದರು.
ಶಸ್ತ್ರ ಚಿಕಿತ್ಸೆ ಬೇಡ: ಹೆರಿಗೆ ವಿಭಾಗದ ಸಿಬ್ಬಂದಿಯೊಂದಿಗೆ ಮಾತನಾಡಿ, ಶಸ್ತ್ರಚಿಕಿತ್ಸೆಗಿಂತ ಸ್ವಾಭಾವಿಕ ಹೆರಿಗೆಗೆ ಹೆಚ್ಚಿನ ಆಧ್ಯತೆ ನೀಡಿ, ಹೆರಿಗೆ ವೇಳೆ ಮಹಿಳೆಯರಿಗೆ ಧೈರ್ಯ ತುಂಬುವ ಅವಶ್ಯಕತೆ ಇದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ.ಎಂ.ಕೆ. ಶೃತಿ, ತಹಸೀಲ್ದಾರ್ ಮೇಘನಾಗಾಂಧಿ, ಮಮತಾ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net