ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ

ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ
Published on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ಗೆ ಸತತ ಮೂರನೇ ಬಾರಿಗೆ ಲಯನ್ಸ್ ಜಿಲ್ಲಾ ಪ್ರಶಸ್ತಿ ದೊರೆತಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಲಯನ್ಸ್ ಜಿಲ್ಲೆ 317ಡಿ ಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಂಭ್ರಮದಲ್ಲಿ ಐದು ವರ್ಷಗಳ ಒಳಗಿನ 10 ಕ್ಲಬ್‌ಗಳ ಒಂದು ವರ್ಷದ ಆಡಳಿತಾತ್ಮಕ ಮತ್ತು ಸೇವೆಯಲ್ಲಿನ ಸಾಧನೆಯನ್ನು ಗುರುತಿಸಿ 2024-25ನೇ ಸಾಲಿನ ಜಿಲ್ಲಾ ಪ್ರಶಸ್ತಿ ದೊರೆತಿದೆ. ಲಯನ್ಸ್ ಜಿಲ್ಲಾ ಪ್ರಾಂತಪಾಲರಾದ ಬಿ.ಎಂ.ಭಾರತಿ ಅವರು ಪ್ರಶಸ್ತಿಯನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಕ್ಲಬ್‌ನ ಸದಸ್ಯರಾದ ಕೆ.ಎ.ಮಹದೇವಪ್ಪಗೆ ಡೈಮಂಡ್ ಜೋನ್ ಚೇರ್ ಪರ್ಸನ್ ಪ್ರಶಸ್ತಿ ನೀಡಲಾಗಿದೆ.

ಕ್ಲಬ್‌ನ ಅಧ್ಯಕ್ಷ ಪಿ.ಕೆ.ಕುಮಾರ್, ಕಾರ್ಯದರ್ಶಿ ಜಿ.ಗಿರೀಶ್, ಸದಸ್ಯ ಮಂಜುನಾಥ್ ಸಿಂಗ್, ಆನಂದ್, ಸುಬ್ರಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net