ಸಿದ್ದಲಿಂಗಮ್ಮಗೆ ವಾತ್ಸಲ್ಯ ಮನೆ ವಿತರಣೆ

16M.D.R.2
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಕಿರಂಗೂರು ಸಿದ್ದಲಿಂಗಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಪ್ರಾದೇಶಿಕ ನಿರ್ದೇಶಕ ಜಯರಾಮ ಬಿ.ನೆಲ್ಲಿತ್ತಾಯ ವಿತರಣೆ ಮಾಡಿದರು. ಎಂ.ಚೇತನಾ, ಬಿ.ಆರ್.ಯೋಗೇಶ್, ದೇವರಾಜ್, ತೇಜಾವತಿ, ಜಯರಾಮ್ ಇದ್ದರು.
Published on

ಮದ್ದೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕೊಪ್ಪ ಹೋಬಳಿಯ ಕಿರಂಗೂರು ಸಿದ್ದಲಿಂಗಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಪ್ರಾದೇಶಿಕ ನಿರ್ದೇಶಕ ಜಯರಾಮ ಬಿ.ನೆಲ್ಲಿತ್ತಾಯ ಅವರು ಶುಕ್ರವಾರ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಾದ್ಯಂತ 18,592 ಸದಸ್ಯರಿಗೆ ಮಾಸಾಶನ ಸೌಲಭ್ಯ ನೀಡಲಾಗುತ್ತಿದೆ. 287 ಹೊಸ ಮನೆ ರಚನೆ, 139 ಮನೆ ರಿಪೇರಿ, 210 ಶೌಚಗೃಹ ಮತ್ತು ಸ್ನಾನಗೃಹ ರಚನೆ, ಹಾಗೆಯೇ ಸೋಲಾರ್ ಅಳವಡಿಕೆ, ನಲ್ಲಿ ನೀರು ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಪ್ರತಿದಿನದ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅಶಕ್ತರಾದ ಫಲಾನುಭವಿಗೆ ವಾತ್ಸಲ್ಯ ಮಿಕ್ಸ್ ಫುಡ್ ವಿತರಣಾ ಮಾಡಲಾಗುತ್ತಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ತಾಲೂಕಿನಲ್ಲಿ ಇದೀಗ 7 ಹೊಸ ಮನೆ ರಚನೆ, 2 ಶೌಚಗೃಹ, ಒಂದು ಸ್ನಾನ ಮನೆ ರಚನೆ ಮಾಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಯೋಜನಾಧಿಕಾರಿ ಬಿ.ಆರ್.ಯೋಗೀಶ್, ಗ್ರಾಪಂ ಅಧ್ಯಕ್ಷ ದೇವರಾಜ್, ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜಾವತಿ, ಮೇಲ್ವಿಚಾರಕಿ ಜಯರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net