

ಕೆ.ಎಂ.ದೊಡ್ಡಿ: ನನಗೆ ಸಮಾಜ ಸೇವೆ ಮಾಡುವ ಹಂಬಲ ಇದ್ದು, ನಾನು ಸಂಪಾದಿಸಿದ ಅಲ್ಪ ಹಣದಲ್ಲಿ ಹಲವು ಸಾಮಾಜಿಕ ಕಾರ್ಯಕ್ಕೆ ನೆರವಾಗುತ್ತೇನೆ ಎಂದು ಸಮಾಜ ಸೇವಕಿ ಚೈತ್ರಾ ಶಶಿಧರ್‌ಗೌಡ ತಿಳಿಸಿದರು.
ಸಮೀಪದ ಕ್ಯಾತಘಟ್ಟ ಗ್ರಾಮಕ್ಕೆ ಸೇರಿದ ಒಂದನೇ ಹಾಗೂ ಎರಡನೇ ಅಂಗನವಾಡಿ ಕೇಂದ್ರಗಳ 40 ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ನನಗೆ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ನನ್ನ ಸಂಪಾದನೆಯ ಸ್ವಲ್ಪ ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ಅವರ ಓದಿಗೆ ಅನುಕೂಲವಾಗಲಿ ಎಂದು ಸಮವಸ್ತ್ರ ವಿತರಿಸುತ್ತಿದ್ದೇನೆ. ಸಮವಸ್ತ್ರ ಸಮಾನತೆಯ ಸೂಚಿಸುವುದರ ಜತೆಗೆ ಮಕ್ಕಳಲ್ಲಿ ಎಲ್ಲ ಒಂದೇ ಎಂಬ ಭಾವನೆ ಮೂಡಲಿದೆ ಎಂದರು.
ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಠ್ಯ ಪರಿಕರಗಳನ್ನು ವಿತರಿಸಲು ಅಗತ್ಯ ಕ್ರಮ ವಹಿಸುತ್ತೇನೆ. ನಿರ್ಗತಿಕರಿಗೆ ಬಡವರಿಗೆ ಸದಾ ನೆರವಾಗಲಿದ್ದೇನೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕ್ಯಾತಘಟ್ಟ ಗಿರೀಶ್, ಮುಖಂಡರಾದ ಅಜ್ಜಹಳ್ಳಿ ಮನು, ಚಂದ್ರಕಾಂತ್, ಕೆ.ಪಿ. ಕೃಷ್ಣ, ಸಿದ್ದರಾಮು, ಪಟೇಲ್ ಮರಿಸ್ವಾಮಿ, ಅಂಗನವಾಡಿ ಕಾರ್ಯಕರ್ತರು ಇದ್ದರು.