ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ

gan (24)
Published on

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಮಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಟಕ ಹಾಗೂ ಕೈ ತೊಳೆಯುವ ಟಕ, ಸಮವಸ್ತ್ರ, ಐಡಿ ಕಾರ್ಡ್, ನೋಟ್ ಪುಸ್ತಕಗಳ ವಿತರಣಾ ಸವಾರಂಭ ಇತ್ತೀಚೆಗೆ ನಡೆಯಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಾತನಾಡಿ, ಈ ಶಾಲೆಯನ್ನು ರಾಜೇಶ್ ಕಾರಂತರು ದತ್ತು ಪಡೆದುಕೊಂಡ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಬಾರಿ ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ ಎಂದು ಶ್ಲಾಘಿಸಿದರು.

ರಾಜೇಶ್ ಕಾರಂತ್ ಉಪ್ಪಿನಕುದ್ರು ವಾತನಾಡಿ, ಶಾಸಕರ 300 ಟ್ರೀಸ್ ಯೋಜನೆಯಡಿ ನಮ್ಮ ಶಾಲೆ ಪ್ರಥಮ ಶಾಲೆಯಾಗಿ ಬೈಂದೂರು ಕ್ಷೇತ್ರಕ್ಕೆ ವಾದರಿಯಾಗಬೇಕು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಗುರಿ ಎಂದರು.

ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ಆಚಾರ್ಯ, ಮರವಂತೆ ಪ್ರೌಢಶಾಲಾ ಮುಖ್ಯಶಿಕ್ಷಕ ಭಾಸ್ಕರ್ ಮಯ್ಯ, ಶಾಲಾ ಮುಖ್ಯಶಿಕ್ಷಕಿ ಗೀತಾ ಮಯ್ಯ, ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net