

ಗಂಗೊಳ್ಳಿ: ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಸಿಬ್ಬಂದಿಗೆ ಬೀಳ್ಕೊಡುಗೆ ಸವಾರಂಭ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆಯಿತು. ಎಎಸ್‌ಐ ಭಾಸ್ಕರ, ಸಿಬ್ಬಂದಿ ಸುರೇಂದ್ರ ಡಿ., ಉದಯ ಗೌಡ ಹಾಗೂ ಯಶೋದಾ ಅವರನ್ನು ಠಾಣೆ ಪರವಾಗಿ ಇನ್ಸ್‌ಪೆಕ್ಟರ್ ವಸಂತರಾಮ ಆಚಾರ್ ಸನ್ಮಾನಿಸಿ ಬೀಳ್ಕೊಟ್ಟರು.
ಉಪನಿರೀಕ್ಷಕರಾದ ಸುಬ್ರಹ್ಮಣ್ಯ ಎಚ್., ಮುಕ್ತಾ ಬಾಯಿ, ಸಹಾಯಕ ಉಪನಿರೀಕ್ಷಕ ಬಾಬು ಪೂಜಾರಿ ಮತ್ತು ಮಂಜುನಾಥ ಗಾಣಿಗ, ಸ್ಥಳೀಯ ಮುಖಂಡ ಹರೀಶ್ ಕೊಡಪಾಡಿ, ಠಾಣೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ದಿನೇಶ ವಂದಿಸಿದರು. ನಾಗರಾಜ ಖಾರ್ವಿ ನಿರೂಪಿಸಿದರು.