ಹಾವೇರಿ ಜಿಲ್ಲೆಯಲ್ಲಿ ಮೂರನೇ ಸುತ್ತಿನ ಕೋವಿಡ್ ಲಸಿಕೆ ವಿತರಣೆ

1-hvr-08a
Published on

ಹಾವೇರಿ: ಜಿಲ್ಲೆಯ ಆಯ್ದ 7 ಸರ್ಕಾರಿ ಆರೋಗ್ಯ ಕೇಂದ್ರ ಹಾಗೂ 2 ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರದಿಂದ ಮೂರನೇ ಸುತ್ತಿನ ಕೋವಿಡ್ ಲಸಿಕೆ ಕೋವಿನ್ 2.0 ನೀಡಿಕೆ ಆರಂಭಗೊಂಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್​ಗೆ 250 ರೂಪಾಯಿ ಶುಲ್ಕ ನಿಗದಿಗೊಳಿಸಲಾಗಿದೆ. 45ರಿಂದ 59 ವರ್ಷದ ್ಚಞಟ್ಟಚಿಜಿಛಜಿಠಿಢ (ಗಂಭೀರ ಕಾಯಿಲೆಯಿಂದ ಬಳಲುವ ಹೃದಯ ರೋಗ ಡಯಾಬಿಟಿಸ್ ರಕ್ತದೊತ್ತಡ) ಹಾಗೂ 60ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತಿದೆ.

ಹಾವೇರಿ ಜಿಲ್ಲಾಸ್ಪತ್ರೆ, ಬ್ಯಾಡಗಿ, ಹಾನಗಲ್ಲ, ಹಿರೇಕೆರೂರು, ರಾಣೆಬೆನ್ನೂರ, ಸವಣೂರ ಹಾಗೂ ಶಿಗ್ಗಾಂವಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾವೇರಿ ನಗರದ ವೀರಾಪುರ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್ ಹಾಗೂ ರಾಣೆಬೆನ್ನೂರ ನಗರದ ಓಂ ಹಾಸ್ಪಿಟಲ್​ನಲ್ಲಿಯೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸೋಮವಾರ ಒಟ್ಟು 20 ಜನ ಲಸಿಕೆ ಪಡೆದಿದ್ದು, ಅದರಲ್ಲಿ 60 ವರ್ಷ ಮೇಲ್ಪಟ್ಟವರು 14 ಜನ, 45ರಿಂದ 59 ವರ್ಷದೊಳಗಿನ ಮೂವರು, ಇನ್ನೂ ಮೂವರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆದ ಶಾಸಕರು: ಸಾರ್ವಜನಿಕರಿಗೆ ಲಸಿಕೆ ನೀಡುವ ಮೊದಲ ದಿನವಾದ ಸೋಮವಾರ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಲಸಿಕೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net