ವಿಶ್ವಪರಿಸರ ದಿನಾಚರಣೆ ಹಿನ್ನೆಲೆಯ್ಲಲಿ ಸಸಿಗಳ ವಿತರಣೆ; ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜನೆ

parisara
Published on

ಬೆಂಗಳೂರು : ಶಕ್ತಿಗಣಪತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಅಲಂಕಾರಿಕ ಸಸಿಗಳನ್ನು ವಿತರಿಸಲಾಯಿತು.

ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಅಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಕೇಶವಮೂರ್ತಿ, ಬೆಂಗಳೂರುನಗರದಲ್ಲಿ ಅಭಿವೃದ್ದಿ ಹೆಸರಲ್ಲಿ ನಿರಂತರವಾಗಿ ಮರಗಿಡಗಳನ್ನು ಕಡಿದ ಪರಿಣಾಮ, ಕಾಂಕ್ರೀಟ್ ನಗರವಾಗಿದೆ. ಆದ್ದರಿಂದ ಮಹಾಲಕ್ಷ್ಮಿಪುರಂ ಮತ್ತು ಶಕ್ತಿಗಣಪತಿನಗರ, ಶಂಕರಮಠ ವಾರ್ಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು ಬರಲಾಗುತ್ತಿದೆ. ಬೆಂಗಳೂರಿಗಿರುವ ಗ್ರೀನ್ ಸಿಟಿ, ಗಾರ್ಡನ್ ಸಿಟಿ ಎಂಬ ಖ್ಯಾತಿಯನ್ನು ಉಳಿಸಿ, ಬೆಳೆಸಬೇಕು ಎಂದರು.

ಶಿವರಾಜು ಮಾತನಾಡಿ, ಪರಿಸರ ಉಳಿದರೆ ನಾಡು ಉಳಿಯುತ್ತದೆ ಪರಿಸರ ಹಾಳಾದರೆ ಇಡಿ ಮನುಕುಲುವೇ ನಾಶವಾಗುತ್ತದೆ. ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಸಸಿ ನೆಟ್ಟು ಬೆಳಸಬೇಕು. ಮರ ಗಿಡಗಳು ಇದ್ದಾಗ ಉತ್ತಮ ವಾತಾವರಣ, ಅಮ್ಲಜನಕ ದೊರೆಯುತ್ತದೆ ಇದರಿಂದ ಆರೋಗ್ಯವಂತರಾಗಿರಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ನರಸಿಂಹಮೂರ್ತಿ, ಜಿ.ಜನಾರ್ಧನ್, ಕೆ.ವಿ.ನಟರಾಜ್, ಪರಿಸರ ರಾಮಕೃಷ್ಣ, ಸುರೇಶ್, ಚಂದ್ರಶೇಖರ್, ಗಂಗಾಧರ್, ಶ್ರೀನಿವಾಸ್, ಚಂದ್ರಕಾಸಿನ್ ಮತ್ತು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net