

ಹಳೆಯಂಗಡಿ: ಮಕ್ಕಳಿಗೆ ಹಾಗೂ ಯುವ ಪ್ರತಿಭೆಗಳಿಗೆ ಪ್ರಕೃತಿ ರಕ್ಷಣೆ ಹಾಗೂ ಗಿಡ ಮರಗಳನ್ನು ಬೆಳೆಸುವ ಬಗ್ಗೆ ಮಾರ್ಗದರ್ಶನ ನೀಡಬೇಕು. ಸಾವಯವ ಕೃಷಿಯಿಂದ ಆದಾಯ ಗಳಿಸುವ ಯೋಜನೆಗಳನ್ನು ತಿಳಿಸಿ ಹೇಳುವುದರಿಂದ ಅಭಿವೃದ್ಧಿ ಸಾಧ್ಯ ಎಂದು ದ.ಕ. ಮೈ ಭಾರತ್ನ ಜಿಲ್ಲಾ ಯುವ ಅಧಿಕಾರಿ ವಿಲಾಸ್ ಕೆ.ಟಿ.ಕೆ. ಹೇಳಿದರು.
ಶ್ರೀ ವಿದ್ಯಾವಿನಾಯಕ ಯುವಕಮಂಡಲ, ರಜತ ಸೇವಾ ಟ್ರಸ್ಟ್ ಯುವತಿ ಮಂಡಲ, ದ.ಕ. ಕಿಶೋರ-ಕಿಶೋರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಮಾತನಾಡಿದರು.
ಹಿರಿಯ ಅಧಿಕಾರಿ ಜಗದೀಶ್, ಯುವಕ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಯುವತಿ ಮಂಡಲದ ಅಧ್ಯಕ್ಷೆ ರಶ್ವಿತಾ, ಯುವಕ ಮಂಡಲದ ಮಾಜಿ ಅಧ್ಯಕ್ಷ ನಾಗೇಶ್ ಟಿ.ಜಿ, ಯುವತಿ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.