

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ನೋಟ್ಸ್ ಪುಸ್ತಕಗಳ ವಿತರಣಾ ಕಾರ್ಯಕ್ರಮ ಶಾಲೆಯಲ್ಲಿ ಬುಧವಾರ ನಡೆಯಿತು.
ದಾನಿ ಪೂರ್ಣಾಕರ ಶೆಟ್ಟಿ ಮೇಲ್ಮನೆ ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ನೋಟ್ಸ್ ಪುಸ್ತಕ ವಿತರಿಸಲಾಯಿತು.
ಮುದ್ರಾಡಿ ಗ್ರಾಪಂ ಸದಸ್ಯ ಗಣಪತಿ ಎಂ.ಮಾತನಾಡಿ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಲು ಶಿಕ್ಷಕರು, ಪಾಲಕರು, ದಾನಿಗಳು ಮುಖ್ಯ ಪಾತ್ರರಾಗಿರುತ್ತಾರೆ. ದಾನಿಗಳು ನೀಡಿದ ಉಚಿತ ನೋಟ್ಸ್ ಪುಸ್ತಕಗಳು ನಿಮ್ಮ ಕಲಿಕೆಗೆ ಸಹಾಯವಾಗಲಿದೆ. ನಾನು 30 ವರ್ಷಗಳಿಂದ ದಾನಿಗಳನ್ನು ಸಂಪರ್ಕಿಸಿ ಗ್ರಾಮದ ಎಲ್ಲ ಶಾಲೆಗಳಿಗೆ ಕೊಡುಗೆಯಾಗಿ ನೀಡಿದ ಪುಸ್ತಕ ವಿತರಣೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇನೆ. ಈ ಶಾಲೆಯಲ್ಲಿ ಕಲಿತು ವಿದ್ಯಾವಂತರಾದವರು ತಾನು ಕಲಿತ ಶಾಲೆಯನ್ನು ಮರೆಯದೆ ಉಚಿತ ಕೊಡುಗೆ ನೀಡುವಂತಾಗಬೇಕು ಎಂದರು.
ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ಉಪಾಧ್ಯಕ್ಷೆ ರಮ್ಯಕಾಂತಿ, ಸದಸ್ಯರಾದ ಸನತ್ ಕುಮಾರ್, ಶುಭದರ ಶೆಟ್ಟಿ, ಎಸ್.ಡಿ. ಎಂ.ಸಿ ಅಧ್ಯಕ್ಷ ಪ್ರಸನ್ನ ಕುಮಾರ್, ದಾನಿ ನವೀನ್ ಶೆಟ್ಟಿ, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.
ಶಾಲಾಮುಖ್ಯಶಿಕ್ಷಕ ಶ್ರೀನಿವಾಸ ಭಂಡಾರಿ ಸ್ವಾಗತಿಸಿದರು. ಸಹ ಶಿಕ್ಷಕ ಬೆಳಂಜೆ ಸತೀಶ್ ನಾಯ್ಕ ನಿರೂಪಿಸಿದರು. ಶಿಕ್ಷಕಿ ವಿಜಯ ಕಿಣಿ ವಂದಿಸಿದರು.