ಬಡವರ ಮೂಗಿಗೆ ತುಪ್ಪ ಸವರಿದ 'ಕೈ' ಸರ್ಕಾರ...

BJP Strike
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ

ಜಿಲ್ಲೆಯ 156 ಗ್ರಾಪಂಗಳಲ್ಲಿ ಜಿಲ್ಲಾ ಬಿಜೆಪಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಂಚ ಗ್ಯಾರಂಟಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್​ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಸರ್ಕಾರಿ ಸೇವೆಗಳ ಶುಲ್ಕ ಹೆಚ್ಚಿಸುವ ಮೂಲಕ ಬಡಜನರ ಹಣವನ್ನೇ ಲೂಟಿ ಮಾಡುತ್ತಿದೆ. ಐದು ಉಚಿತ ಯೋಜನೆಗಳ ನೆಪದಲ್ಲಿ ಬಡವರ ಮೂಗಿಗೆ ತುಪ್ಪ ಸವರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಪ್ರಮುಖ ಐದು ಜನವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಎಲ್ಲ 156 ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಜೂನ್​ 23ರಂದು ಧರಣಿ ಹಮ್ಮಿಕೊಳ್ಳಲಾಗಿದ್ದು, ತೆಂನಿಡಿಯೂರು ಗ್ರಾಪಂ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯದ ಬಡಜನರ ಪರದಾಟ

BJP 4
ರಾಜ್ಯದ ಬಡ ಜನರು ಒಂದು ಮನೆ ಕಟ್ಟಲು ಹಲವಾರು ಬಾರಿ ಗ್ರಾಪಂ ಹಾಗೂ ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ. ಇಡ್ಲಿ-ಸಾಂಬಾರ್​ಗೆ ದರ ನಿಗದಿಸುವಂತೆ ನೀಲಿನಕಾಶೆಗೂ ಸಹ ಕಂದಾಯ ಇಲಾಖೆ ದರ ನಿಗದಿಸಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ಹಫ್ತಾ ವಸೂಲಿ ದಂಧೆಗಿಳಿದಿದೆ. ಯಾವುದೇ ಮಾಹಿತಿ ನೀಡದೆ ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸುತ್ತಿದೆ. ಅಧಿಕಾರಕ್ಕೆ ಬಂದು 2 ವರ್ಷವಾದರೂ ಆಶ್ರಯ ಮನೆ ಮಂಜೂರು ಮಾಡಿಲ್ಲ. ಮನೆ ಮಂಜೂರಿಗೂ ಸಹ ಲಂಚ ಕೊಡುವ ಪರಿಸ್ಥಿತಿ ಬಂದಿದೆ ಎಂದು ಅವರದೇ ಪಕ್ಷದ ಶಾಸಕ ಡಿ.ಆರ್​. ಪಾಟೀಲ ಬಹಿರಂಗ ಆರೋಪ ಮಾಡಿದ್ದಾರೆ. ಹಿರಿಯರ ಪಿಂಚಣಿ ನಿಲ್ಲಿಸಿದ್ದಾರೆ. ಉಚಿತ ವಿದ್ಯುತ್​ ಕೊಡುವುದಾಗಿ ಹೇಳಿ ಯೂನಿಟ್​ಗೆ 36 ಪೈಸೆ ಅನಧಿಕೃತವಾಗಿ ಏರಿಸಿ ವಂಚಿಸುತ್ತಿದ್ದಾರೆ ಎಂದು ಯಶ್​ಪಾಲ್​ ಸುವರ್ಣ ಆರೋಪಿಸಿದರು.

ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ ಅಮೀನ್​, ಪಕ್ಷದ ಪ್ರಮುಖರಾದ ದಿನಕರ ಬಾಬು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ, ತೆಂನಿಡಿಯೂರು ಗ್ರಾಪಂ ಉಪಾಧ್ಯಕ್ಷ ಅರುಣ, ಗ್ರಾಪಂ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಕಮಲ ಪಡೆಯ ಹೋರಾಟದ ಉದ್ದೇಶ

* 9/11 ನಿವೇಶನಗಳ ಸಮಸ್ಯೆ ಬಗೆಹರಿಸಲು ಆಗ್ರಹ * ಆಕ್ರಮ-ಸಕ್ರಮ ಅರ್ಜಿ ತಿರಸ್ಕರಿಸುತ್ತಿರುವುದಕ್ಕೆ ವಿರೋಧ * ಬಡವರಿಗೆ ಆಶ್ರಯ ಮನೆ, ಅನುದಾನ ಬಿಡುಗಡೆಗೆ ಒತ್ತಾಯ * ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ರದ್ದತಿಗೆ ಆಕ್ಷೇಪ * ಮಾಹಿತಿ ನೀಡದೆ ವಿದ್ಯುತ್​ ದರ ಏರಿಕೆಗೆ ಖಂಡನೆ

ಜಿಲ್ಲೆಯ ಒಂದೇ ಸ್ಥಳದಲ್ಲಿ ಪ್ರತಿಭಟಿಸಿದರೆ ಅದು ಹೆಚ್ಚು ಜನರನ್ನು ತಲುಪುವುದಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ಜಿಲ್ಲೆಯ 156 ಗ್ರಾಪಂಗಳ ಮುಂಭಾಗದಲ್ಲಿ ಕನಿಷ್ಠ 100 ಜನರು ಸೇರುವ ಮೂಲಕ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಏಕಕಾಲದಲ್ಲಿ ಪ್ರತಿಭಟಿಸಿದ್ದೇವೆ. ವಾರದೊಳಗೆ ಸರ್ಕಾರ ಈ ಎಲ್ಲ ಸಮಸ್ಯೆ ಸರಿಪಡಿಸದಿದ್ದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್​ ಹೋರಾಟ ನಡೆಸಲಿದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ಆತ್ರಾಡಿ ಗ್ರಾಪಂ ಮುಂಭಾಗದಲ್ಲಿ ಧರಣಿ

BJP 3
ಉಡುಪಿ ತಾಲೂಕಿನ 38ನೇ ಆತ್ರಾಡಿ ಗ್ರಾಪಂ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್​ ಸರ್ಕಾರದ ಜನ ವಿರೋಧಿ, ದಮನ ನೀತಿ ಖಂಡಿಸಿ ಪ್ರತಿಭಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷರಾದ ಗುರುನಂದ ನಾಯಕ, ರತ್ನಾಕರ ಶೆಟ್ಟಿ, ರೂಪಾ ಶೆಟ್ಟಿ, ಅಧ್ಯಕ್ಷ ಹರೀಶ ಶೆಟ್ಟಿ, ಉಪಾಧ್ಯೆ ಶಾರದಾ ಶೆಟ್ಟಿಗಾರ, ಪ್ರಮುಖರಾದ ಶ್ರೀಕಾಂತ ಕಾಮತ, ಸದಸ್ಯರಾದ ಗಂಗಾಧರ ಪ್ರಭು ಜಡ್ಡು, ಹರಿಣಿ ಶೆಟ್ಟಿ, ವಿನಂತಿ ನಾಯ್ಕ, ಪ್ರತಿಮಾ ನಾಯ್ಕ, ಕಾರ್ಯಕರ್ತರಾದ ಸುಂದರ ಮೂಲ್ಯ, ಬಾಲಕೃಷ್ಣ ಹೆಗ್ಡೆ, ದೇವದಾಸ ನಾಯಕ, ಹರಿ ಜೀವನ ರೈ, ಸದಾಶಿವ ನಾಯಕ, ದಿನೇಶ ಕುಲಾಲ್, ಗೋಪಾಲಕೃಷ್ಣ ಆಚಾರ್ಯ, ಸುಜಾತಾ ಶೆಟ್ಟಿ, ಸುಧೀರ ಪೂಜಾರಿ, ಮುರಳೀಧರ ಹಾಲoಬಿ, ಸರಸ್ವತಿ ಪ್ರಭು ಆತ್ರಾಡಿ, ವಸಂತ ನಾಯಕ, ರಮೇಶ ಪ್ರಭು, ವೀರೇಂದ್ರ ಪೂಜಾರಿ, ಶಶಿ ಪೂಜಾರಿ, ಸುಂದರ ನಾಯ್ಕ ಇತರರಿದ್ದರು.

ಅಂಬಲಪಾಡಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಉಡುಪಿಯ ಅಂಬಲಪಾಡಿ ಗ್ರಾಪಂ ಎದುರು ಶಾಸಕ ಯಶ್​ಪಾಲ್​ ಸುವರ್ಣ ನೇತೃತ್ವದಲ್ಲಿ ಬೃಹತ್ ಧರಣಿ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.

BJP 2
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಗಿರೀಶ ಅಂಚನ್, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಮಾತನಾಡಿ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿದರು.

ಪ್ರಮುಖರಾದ ಪ್ರವೀಣಕುಮಾರ್ ಶೆಟ್ಟಿ ಕಪ್ಪೆಟ್ಟು, ಗಿರೀಶ ಅಮೀನ್ ಕಿದಿಯೂರು, ಯೋಗೀಶ ಶೆಟ್ಟಿ ಅಂಬಲಪಾಡಿ, ರಾಮರಾಜ ಕಿದಿಯೂರು, ಮಹೇಂದ್ರ ಕೋಟ್ಯಾನ್, ನಾಗರಾಜ ಕರ್ಕೇರ, ವಿಜಯ ಶೆಟ್ಟಿ, ಹರೀಶ ಆಚಾರ್ಯ, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ಯೋಗೀಶ ಶೆಟ್ಟಿ,‌ ಉಪಾಧ್ಯಕ್ಷೆ ಸುಜಾತಾ ಸುಧಾಕರ, ಸದಸ್ಯರಾದ ರಾಜೇಶ ಸುವರ್ಣ, ಭಾರತಿ ಭಾಸ್ಕರ, ಸೋಮನಾಥ ಬಿ.ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net