

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಸಹಭಾಗಿತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿರುವ ಕುತ್ಲೂರು ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.
ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಿಸಲಾಯಿತು. ಸಮೃದ್ಧಿ ಎಂಟರ್ಪ್ರೈಸಸ್ ವಾಲೀಕ ಕಾಲೀಂ ಶಾಲೆಗೆ ಕಪಾಟು ಹಸ್ತಾಂತರಿಸಿದರು.
ಕುತ್ಲೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಸಂತೋಷ್ ಕುವಾರ್ ಕೊಲ್ಯ, ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ದೀಪಕ್ ಜಿ., ಪದಾಧಿಕಾರಿಗಳಾದ ಶ್ರೀನಿವಾಸ್ ಕುಲಾಲ್, ಲಕ್ಷ್ಮಣ ಕೋಟ್ಯಾನ್, ವಿನೀತ್ ಬಂಗೇರ, ಸುಜಾತಾ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಮುಖ್ಯಶಿಕ್ಷಕ ಜ್ಯೋತಿ, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ನಿಮಿತ್ ಜೈನ್, ಗ್ರಾ.ಪಂ. ಸದಸ್ಯರಾದ ಮೀನಾ, ಪ್ರೇಮಾ ಉಪಸ್ಥಿತರಿದ್ದರು. ರಾಜಾಕಾಳಪ್ಪ ನಿರೂಪಿಸಿದರು. ರೂಪಾ ಕುವಾರಿ ವಂದಿಸಿದರು.