ಕೊಡಗು ಗೌಡ ಸಮಾಜದಿಂದ ಕಾವೇರಿ ತೀರ್ಥ ವಿತರಣೆ

19.npk-2
Published on

ನಾಪೋಕ್ಲು: ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಂಧುಗಳಿಗೆ ಮತ್ತು ಕಾವೇರಿ ಭಕ್ತರಿಗೆ ಕಾವೇರಿ ತೀರ್ಥವನ್ನು ಶ್ರದ್ಧಾ ಭಕ್ತಿಯಿಂದ ವಿತರಣೆ ಮಾಡಲಾಯಿತು.

ಮೈಸೂರಿನ ಕೊಡಗು ಗೌಡ ಸಮುದಾಯ ಭವನದ ದೇವರ ಮಂಟಪದಲ್ಲಿ ತೀರ್ಥ ಪೂಜೆ ನೆರವೇರಿಸಿದ ನಂತರ, ನೆರೆದ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ಪೊನ್ನೆಟಿ ನಂದ, ನಡುವಟ್ಟಿರ ಲಕ್ಷ್ಮಣ, ನಡುಮನೆ ಚೆಂಗಪ್ಪ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಪಾಣತ್ತಲೆ ವಸಂತ, ಚಪ್ಪೆರ ಯಮುನಾ, ಕುಂಟುಪುಣಿ ಶೀಲಾ, ತೊಟಂಬೈಲು ಇಂದಿರಾ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ತೊಟಂಬೈಲು ಮನೋಹರ, ಕುದುಪಜೆ ಕುಶಾಲಪ್ಪ, ಕೊಡಗು ಮತ್ತು ದ. ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಡುವಟ್ಟಿರ ಗೀತಾ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net