ಪ್ರೋತ್ಸಾಹಧನ ವಿತರಣೆ, ಅಭಿನಂದನೆ

kota
Published on

ಕೋಟ: ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಸಾಲಿಗ್ರಾಮ ವ್ಯಾಪ್ತಿಯ 58 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಇತ್ತೀಚೆಗೆ ಸಾಲಿಗ್ರಾಮ ದೇವಸ್ಥಾನದ ಕೂಟಬಂಧು ಭವನದಲ್ಲಿ ನಡೆಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ ಮತ್ತು ರಾಜ್ಯ ಹೊಯ್ಸಳ ಶೌರ್ಯ ಪ್ರಶಸ್ತಿ ಪುರಸ್ಕೃತ ಮಾ.ಧೀರಜ್ ಐತಾಳ ಅವರನ್ನು ಅಭಿನಂದಿಸಲಾಯಿತು.

ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಪಿ.ಸಿ.ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿದರು. ಕೂಟ ಮಹಾಜಗತ್ತು ಪ್ರಧಾನ ಕಾರ್ಯದರ್ಶಿ ಸಿ.ಸುರೇಶ್ ತುಂಗ ಬಿಲಿಯನ್ ಫೌಂಡೇಶನ್ ಉದ್ದೇಶ ವಿವರಿಸಿದರು. ಬಿಲಿಯನ್ ಫೌಂಡೇಶನ್ ಪ್ರತಿನಿಧಿ ಸುಬ್ರಹ್ಮಣ್ಯ ಹೇರ್ಳೆ ಫಲಾನುಭವಿಗಳ ಪಟ್ಟಿ, ಪಿ.ಮಂಜುನಾಥ ಉಪಾಧ್ಯ ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಚಿದಾನಂದ ತುಂಗ ವಂದಿಸಿದರು. ಕೋಶಾಧಿಕಾರಿ ನಾಗರಾಜ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net