ಸಹಕಾರಿ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಪ್ರಮುಖ

incentive
ನಾಲ್ಕೂರು ಅಮೂಲ್ಯ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. 10ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‌್ಯಾಂಕ್ ಗಳಿಸಿದ ಅಮೃತ ಶೆಣೈ ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಸಹಕಾರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಸದಸ್ಯರು, ಗ್ರಾಹಕರ ಪಾತ್ರ ಹಿರಿದು. ಸಂಘಗಳ ಅಭಿವೃದ್ಧಿಯಲ್ಲಿ ಬಂಡವಾಳ ಹೂಡಿಕೆ ಜತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರನ್ನು ಗುರುತಿಸುವುದರಿಂದ ಸಂಘದ ಬೆಳವಣಿಗೆಯಾಗುತ್ತದೆ ಎಂದು ನಾಲ್ಕೂರು ಅಮೂಲ್ಯ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. 10ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಹಕಾರಿ ಅಧ್ಯಕ್ಷ ಎಂ.ಭಕ್ತವತ್ಸಲ ಶೆಟ್ಟಿ ಹೇಳಿದರು.
ನಾಲ್ಕೂರು ಗ್ರಾಪಂ ಸಮುದಾಯಭವನದಲ್ಲಿ ಭಾನುವಾರ ವಾರ್ಷಿಕ ಸಾಮಾನ್ಯ ಸಭೆ ಜರುಗಿತು.

ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಲಕೃಷ್ಣ ವೈದ್ಯ ಮುದ್ದೂರು, ಸಂಘದ ಉಪಾಧ್ಯಕ್ಷ ಸಂತೋಷ್ ಹೆಗ್ಡೆ, ನಿರ್ದೇಶಕರಾದ ಎನ್.ಕರುಣಾಕರ ಶೆಟ್ಟಿ, ವಿಶ್ವಪ್ರಸಾದ ಹೆಗ್ಡೆ, ದಯಾನಂದ ಶೆಟ್ಟಿ, ಗುಣಪಾಲ ಶೆಟ್ಟಿ, ಸದಾಶಿವ ಶೆಟ್ಟಿ, ಕಾಶಿನಾಥ್ ಶೆಣೈ, ಸುಚಿತ್ರಾ ಶೆಟ್ಟಿ, ವಸಂತ ವಿ.ಶೆಟ್ಟಿ, ರಾಜಾರಾಮ ಶೆಟ್ಟಿ, ಪ್ರೇಮ ಸಂಜೀವ, ರಾಘವೇಂದ್ರ ಆಚಾರಿ, ಗೌರಿ, ಕೆ.ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ನೌಕರ ಸಂಪತ್ ಶೆಟ್ಟಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶೆಟ್ಟಿ ಸಹಕಾರಿ ವರ್ಷದ ವರದಿ ವಾಚಿಸಿದರು. ರಶ್ಮಿತಾ ಶೆಟ್ಟಿ ವಂದಿಸಿದರು. ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‌್ಯಾಂಕ್ ಗಳಿಸಿದ ಅಮೃತ ಶೆಣೈ ಅವರನ್ನುಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net